ಮಾಜಿ ಕೇಂದ್ರ ಸಚಿವೆ ಡಾ.ನಜ್ಮಾ ಹೆಪ್ತುಲ್ಲ ಮಣಿಪುರದ ನೂತನ ರಾಜ್ಯಪಾಲೆ
Update: 2016-08-17 14:46 IST
ಹೊಸದಿಲ್ಲಿ, ಆ.17: ಕೇಂದ್ರ ಸರಕಾರ ಇಂದು ಮೂರು ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಕ ಮಾಡಿದ್ದು, ಮಾಜಿ ಕೇಂದ್ರ ಸಚಿವೆ ಡಾ.ನಜ್ಮಾ ಹೆಪ್ತುಲ್ಲ ಮಣಿಪುರದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.
ನಜ್ಮಾ ಮಣಿಪುರದ ಹದಿನೆಂಟನೆಯ ರಾಜ್ಯಪಾಲರಾಗಿದ್ದಾರೆ. ಅವರು 75 ವರ್ಷ ದಾಟಿರುವ ಹಿನ್ನೆಲೆಯಲ್ಲಿ ಕಳೆದ ಜುಲೈ 12 ರಂದು ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು.
ಮೇಘಾಲಯದ ಗವರ್ನರ್ ವಿ. ಷಣ್ಮುಗನಾಥನ್ ಅವರು ಸೆ. 30, 2015ರಿಂದ ಈ ತನಕ ಮಣಿಪುರದ ರಾಜ್ಯಪಾಲರಾಗಿ ಉಸ್ತುವಾರಿ ನೋಡಿಕೊಳ್ಳುತ್ತಿದರು.