×
Ad

ಸರಕಾರಿ ಅಧಿಕಾರಿಯನ್ನು ಥಳಿಸಿದ ಮಹರಾಷ್ಟ್ರ ಶಾಸಕ ! : ವೀಡಿಯೊ ಬಹಿರಂಗ

Update: 2016-08-17 15:04 IST

ಮುಂಬೈ,ಆ.17: ಮಹಾರಾಷ್ಟ್ರ ಶಾಸಕರೊಬ್ಬರು ಸರಕಾರಿ ಅಧಿಕಾರಿಯೊಬ್ಬರನ್ನು ಥಳಿಸಿದ ಘಟನೆ ವಿವಾದದ ಕಿಡಿ ಹಚ್ಚಿದೆ. ಎನ್‌ಸಿಪಿ ಶಾಸಕ ಕರ್ಜಡ್ ಸುರೇಶ್ ಲಾಡ್ ರಾಯಿಗಡದ ಡೆಪ್ಯುಟಿ ಕಲೆಕ್ಟರ್ ಅಭಯ್ ಕಲ್‌ಗುಡ್ಕರ್‌ರನ್ನು ಥಳಿಸಿದ್ದು ಪೆಟ್ರೋಲಿಯಂ ಪೈಪ್ ಲೈನ್‌ಗಾಗಿ ರೈತರಿಂದ ವಶಪಡಿಸಲಾದ ಜಮೀನಿಗೆ ಪರಿಹಾರ ವಿತರಿಸುತ್ತಿರುವ ಸಮಾರಂಭದಲ್ಲಿ ಈ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.

  ವಶಪಡಿಸಿಕೊಳ್ಳಲಾದ ಜಮೀನಿನಲ್ಲಿ ಲಾಡ್‌ರಿಗೆ ಸೇರಿದ ಜಮೀನು ಇದೆ ಎನ್ನಲಾಗಿದೆ. ಆದರೆ ಡೆಪ್ಯುಟಿ ಕಲೆಕ್ಟರ್‌ರಿಗೆ ಯಾವ ಕಾರಣಕ್ಕಾಗಿ ಶಾಸಕರು ಹೊಡೆದರು ಎಂದು ಸ್ಪಷ್ಟವಾಗಿಲ್ಲ. ಆದರೆ ಅವರು ಹೊಡೆಯುತ್ತಿರುವ ವೀಡಿಯೊ ವೈರಲ್ ಆಗಿದೆ.

ಈ ನಡುವೆ ತಾನು ಡೆಪ್ಯುಟಿ ಕಲೆಕ್ಟರ್‌ರನ್ನು ಹೊಡೆದಿಲ್ಲ ಎಂದು ಶಾಸಕ ಲಾಡ್ ಹೇಳುತ್ತಿದ್ದಾರೆ ಎಂದು ವರದಿ ತಿಳಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News