ಬೆಲೆಯೇರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಸರಕಾರ ವಿಫಲ: ವಿ. ಕುಕ್ಯಾನ್
ಮಂಗಳೂರು, ಆ.17: ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ವಸ್ತುಗಳ ಬೆಲೆಯೇರಿಕೆಯನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಆರೋಪಿಸಿದ್ದಾರೆ.
ಅವರು ಸಿಪಿಐನಿಂದ ದ.ಕ ಜಿಲ್ಲಾಧಿಕಾರಿ ಕಚೇರಿ ಎದುರು ಕೇಂದ್ರ ಸರಕಾರವು ಬೆಲೆಯೇರಿಕೆ, ದಲಿತರ ಮೇಲೆ ಹಲ್ಲೆಯನ್ನು ತಡೆಯಲು ವಿಫಲವಾಗಿದೆ ಎಂದು ಆರೋಪಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಅಧಿಕಾರಕ್ಕೇರಿದಾಗ ದೇಶದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆಯನ್ನು ನೀಡಿ, ಯುವಕರ ಮತ ಪಡೆದ ಸರಕಾರ ಈಗ ಕೊಟ್ಟಿದ್ದ ಭರವಸೆಯನ್ನು ಈಡೇರಿಸುತ್ತಿಲ್ಲ ಎಂದು ಆರೋಪಿಸಿದರು.ರಾಜ್ಯ ಸರಕಾರವು ಕಾರ್ಮಿಕರ ವೇತನವನ್ನು ಹೆಚ್ಚಳ ಮಾಡದೆ ಶಾಸಕರ ವೇತನ ಹೆಚ್ಚಳ ಮಾಡಲು ಆಸಕ್ತಿ ಹೊಂದಿದೆ ಎಂದು ಹೇಳಿದರು.
ಪ್ರತಿಭಟನೆಯ ನೇತೃತ್ವವನ್ನು ಸಿಪಿಐ ಮುಖಂಡರುಗಳಾದ ವಿ.ಸೀತಾರಾಂ ಬೇರಿಂಜ, ಎಚ್.ವಿ.ರಾವ್, ಕರುಣಾಕರ ಕುಲಾಲ್, ಶಿವಪ್ಪ ಕೋಟ್ಯಾನ್, ಪ್ರಭಾಕರ ರಾವ್, ತಿಮ್ಮಪ್ಪಕುಂಜತ್ತಬೈಲ್, ಸುಲೋಚನಾ, ಚಿತ್ರಾವತಿ, ಸಂಜೀವಿ ಹಳೆಯಂಗಡಿ ಮೊದಲಾದವರು ವಹಿಸಿದ್ದರು.