×
Ad

ದುಬಾರಿಯಾದ ಫೇಸ್‌ಬುಕ್ ದೋಸ್ತಿ: ಪೊಲೀಸರ ಮೊರೆ ಹೋದ ಯುವತಿ!

Update: 2016-08-17 17:26 IST

ಕಾನ್ಪುರ,ಆ.17: ಉತ್ತರ ಪ್ರದೇಶದ ಕಾನ್ಪುರ ಪನಕಿ ಎಂಬಲ್ಲಿ ಯುವತಿಯೊಬ್ಬಳು ಫೇಸ್‌ಬುಕ್ ಫ್ರೆಂಡ್ ಕಾಟದಿಂದ ಪಾರಾಗಲು ಪೊಲೀಸರ ನೆರವು ಪಡೆದ ಘಟನೆ ವರದಿಯಾಗಿದೆ.

   ಪೊಲೀಸರು ತಿಳಿಸಿರುವ ಪ್ರಕಾರ ಗಂಗಾಗಂಜ್ ಪನಕಿಯ ನಿವಾಸಿಯಾದ ಯುವತಿಯೊಬ್ಬಳಿಗೆ ಕೆಲವು ಸಮಯದ ಹಿಂದೆ ಯುವಕನೊಬ್ಬ ಫೇಸ್‌ಬುಕ್ ಮೂಲಕ ಗೆಳೆಯನಾಗಿದ್ದ. ನಂತರ ಆತ ಯುವತಿಯನ್ನು ವಿವಾಹವಾಗುವುದಾಗಿ ನಂಬಿಸಿ ಅವಳೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದು, ಅದನ್ನು ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿದ್ದಾನೆ ಎನ್ನಲಾಗಿದೆ. ಈತ ಯುವತಿಗೆ ಕಳೆದ ಮೂರು ತಿಂಗಳಿಂದ ನಿರಂತರವಾಗಿ ಈ ದೃಶ್ಯಗಳನ್ನು ಇಂಟರ್‌ನೆಟ್‌ಗೆ ಅಪ್‌ಲೋಡ್ ಮಾಡುವೆ ಎಂದು ಬ್ಲಾಕ್‌ಮೇಲ್ ಮಾಡತೊಡಿಗಿದ್ದಾನೆ ಎನ್ನಲಾಗಿದೆ.

 ಯುವತಿ ಈ ಕುರಿತು ಪನಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ಪ್ರಕರಣದ ತನಿಖೆ ನಡೆಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News