×
Ad

ಕಾಸರಗೋಡು: ಜಿಲ್ಲಾಧಿಕಾರಿಯಾಗಿ ಕೆ. ಜೀವನ್ ಬಾಬು ಅಧಿಕಾರ ಸ್ವೀಕಾರ

Update: 2016-08-17 17:51 IST

ಕಾಸರಗೋಡು, ಆ.17: ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಕೆ. ಜೀವನ್ ಬಾಬು ಬುಧವಾರ ಅಧಿಕಾರ ಸ್ವೀಕರಿಸಿದರು.

ಹಾಲಿ ಜಿಲ್ಲಾಧಿಕಾರಿ ಇ.ದೇವದಾಸನ್, ಹೆಚ್ಚುವರಿ ದಂಡಾಧಿಕಾರಿ ಎಂ.ಕೆ. ಅಂಬುಜಾಕ್ಷನ್, ಉಪ ಜಿಲ್ಲಾಧಿಕಾರಿ ಎಚ್. ದಿನೇಶನ್, ಡಾ.ಪಿ.ಕೆ.ಜಯಶ್ರೀ, ಎನ್.ದೇವಿದಾಸ್, ಅಬ್ದುಸ್ಸಲಾಂ, ಎ.ದೇವಯಾನಿ, ಕೆ.ಕುಂಞಾಂಬು ನಾಯರ್, ಜಿಲ್ಲಾ ವಾರ್ತಾಧಿಕಾರಿ ಸುಗತನ್ ಇ.ವಿ . ಮೊದಲಾದವರು ನೂತನ ಜಿಲ್ಲಾಧಿಕಾರಿಯನ್ನು ಬರಮಾಡಿಕೊಂಡರು.

ಕೇರಳದ ತೊಡುಪುಯ ನಿವಾಸಿಯಾಗಿರುವ ಜೀವನ್ ಬಾಬು 2009ರಲ್ಲಿ ಭಾರತೀಯ ಕಂದಾಯ ಸೇವೆ, 2010ರಲ್ಲಿ ಪಶ್ಚಿಮ ಬಂಗಾಳದಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 2011ರ ಐಎಎಸ್ ಬ್ಯಾಚ್ ಅಧಿಕಾರಿಯಾದ ಜೀವನ್ ಬಾಬು, ತ್ರಿಶ್ಯೂರಿನಲ್ಲಿ ಉಪ ಜಿಲ್ಲಾಧಿಕಾರಿ, ಕಾಞಂಗಾಡ್ ನಲ್ಲಿ ಉಪ ಜಿಲ್ಲಾಧಿಕಾರಿ, ಅಬಕಾರಿ ಸಹಾಯಕ ಆಯುಕ್ತ , ಸರ್ವೇ ನಿರ್ದೇಶಕ, ಗೋಡಂಬಿ ಅಭಿವೃದ್ಧಿ ನಿಗಮದ ನಿರ್ದೇಶಕ, ಚುನಾವಣಾ ಉಪ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News