ಕಡಬ: ಸ್ವತಃ ಅಪಾಯವನ್ನು ಆಹ್ವಾನಿಸುತ್ತಿದೆ ಸರಕಾರಿ ಆಂಬ್ಯುಲೆನ್ಸ್
Update: 2016-08-17 17:59 IST
ಕಡಬ, ಆ.16: ಅಪಘಾತದಂತಹ ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಎಂದು ಸರಕಾರದಿಂದ ನಿಯೋಜಿತವಾಗಿರುವ 108 ಆಂಬ್ಯುಲೆನ್ಸ್ ವಾಹನದಲ್ಲಿ ಟೈರ್ ಸರಿಯಿಲ್ಲದಿದ್ದರೆ ಹೇಗೆ....?
ಹೌದು... ಕಡಬ ಪರಿಸರದಲ್ಲಿ ತುರ್ತು ಸಂದರ್ಭಕ್ಕೆಂದು ಕೊಡಮಾಡಿರುವ 108 ಆಂಬ್ಯುಲೆನ್ಸ್ ವಾಹನದ ಮುಂಭಾಗದ ಬಲಬದಿಯ ಟಯರ್ ಸವೆದಿದ್ದು ಈಗಲೋ ಆಗಲೋ ಒಡೆಯುವ ಸ್ಥಿತಿಯಲ್ಲಿದೆ.
ಅಪಘಾತದಂತಹ ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಟೈರ್ ಒಡೆದು ಏನಾದರೂ ಅನಾಹುತಗಳು ಸಂಭವಿಸುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.