×
Ad

ಮಂಗಳೂರಿನಿಂದ ದುಬೈಗೆ ಹಾರಲು ಹೊರಟಿದ್ದ ಈತನ ಬಳಿ ಇದ್ದ ಪಾಸ್‌ಪೋರ್ಟ್‌ಗಳೆಷ್ಟು ಗೊತ್ತೇ?

Update: 2016-08-17 20:29 IST

ಮಂಗಳೂರು, ಆ. 17: 26 ಪಾಸ್‌ಪೋರ್ಟ್‌ಗಳನ್ನು ಹೊಂದಿ ದುಬೈಗೆ ಪ್ರಯಾಣಿಸಲು ಯತ್ನಿಸಿದ ವ್ಯಕ್ತಿಯೋರ್ವನನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ.

ಬಂಧಿತನನ್ನು ಕಣ್ಣೂರಿನ ನಿವಾಸಿ ಅಬ್ದುಲ್ಲಾ ಪಳಕ್ಕನ್ ಎಂದು ಗುರುತಿಸಲಾಗಿದೆ.

ಅಬ್ದುಲ್ಲಾ ದುಬೈಗೆ ಪ್ರಯಾಣಿಸಲೆಂದು ಮಂಗಳವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ. ಭದ್ರತಾ ಸಿಬ್ಬಂದಿ ಆತನನ್ನು ತಪಾಸಣೆಗೊಳಪಡಿಸಿದಾಗ ಆತನಲ್ಲಿ ಭಾರತದ 24 ಪಾಸ್‌ಪೋರ್ಟ್‌ಗಳು ಮತ್ತು ಅಮೆರಿಕದ ಎರಡು ಪಾಸ್‌ಪೋರ್ಟ್‌ಗಳು ಕಂಡುಬಂದಿವೆ. ಭದ್ರತಾ ಸಿಬ್ಬಂದಿ ಆರೋಪಿಯನ್ನು ವಿಮಾನ ನಿಲ್ದಾಣದ ಇಮಿಗ್ರೇಷನ್ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News