ಸುಶ್ಮಾ ‘ಸರಕಾರದ ಸೂಪರ್ ಮಾಮ್’ : ‘ವಾಶಿಂಗ್ಟನ್ ಪೋಸ್ಟ್’ ಬಣ್ಣನೆ
Update: 2016-08-17 21:23 IST
ವಾಶಿಂಗ್ಟನ್, ಆ. 17: ಟ್ವಿಟರ್‌ನಲ್ಲಿ ಸಕ್ರಿಯರಾಗಿದ್ದುಕೊಂಡು, ಅಗತ್ಯವಿದ್ದವರಿಗೆ ಸೂಕ್ತ ಸಲಹೆ ಸೂಚನೆಗಳನ್ನು ಕೊಡುತ್ತಿರುವ ವಿದೇಶ ಸಚಿವೆ ಸುಶ್ಮಾ ಸ್ವರಾಜ್‌ರನ್ನು ಅಮೆರಿಕದ ದೈನಿಕ ‘ದ ವಾಶಿಂಗ್ಟನ್ ಪೋಸ್ಟ್’ ‘‘ಸರಕಾರದ ಸೂಪರ್ ಮಾಮ್ (ಅತ್ಯುತ್ತಮ ತಾಯಿ)’’ ಎಂಬುದಾಗಿ ಕರೆದಿದೆ.
ಪತ್ರಿಕೆಯು ಸಚಿವೆಯ ಟ್ವಿಟರ್ ಸಾಧನೆಗಳನ್ನು ಶ್ಲಾಘಿಸಿದೆ. ಸೌದಿ ಅರೇಬಿಯದಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರಿಗೆ ಆಹಾರ ಒದಗಿಸುವುದು ಸೇರಿದಂತೆ ವಿದೇಶಗಳಲ್ಲಿರುವ ಭಾರತೀಯರಿಗೆ ಸಹಾಯ ಮಾಡಲು ಆಕೆ ತೆಗೆದುಕೊಂಡಿರುವ ಕ್ರಮಗಳಿಗೆ ಅದು ಮೆಚ್ಚುಗೆ ವ್ಯಕ್ತಪಡಿಸಿದೆ.