ಮಂಗಳೂರು: ನಿಯಮ ಉಲ್ಲಂಘಿಸಿದ 9 ಬಸ್‌ಗಳು ವಶಕ್ಕೆ

Update: 2016-08-17 18:32 GMT

ಮಂಗಳೂರು, ಆ. 17: ನಗರದಲ್ಲಿ ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಸಂಚರಿಸುತ್ತಿದ್ದ ಒಂಬತ್ತು ಬಸ್ಸುಗಳನ್ನು ಮಂಗಳೂರು ಸಾರಿಗೆ ಇಲಾಖೆ ವಶಕ್ಕೆ ಪಡೆದುಕೊಂಡಿದೆ.

ಸಾರಿಗೆ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಬುಧವಾರ ನಾಲ್ಕು ಬಸ್ಸುಗಳನ್ನು ವಶಕ್ಕೆ ಪಡೆದರೆ, ವಾರದ ಹಿಂದೆ ಐದು ಬಸ್ಸುಗಳ ಸಹಿತ ಒಟ್ಟು ಒಂಬತ್ತು ಬಸ್ಸುಗಳನ್ನು ವಶಕ್ಕೆ ಪಡೆದಕೊಂಡು ಬಸ್ಸಿನ ಮಾಲಕರಿಗೆ ಎಚ್ಚರಿಕೆ ನೀಡಿದೆ.

ನಗರದಲ್ಲಿ ಕೆಲವು ಬಸ್‌ಗಳು ತೆರಿಗೆ ಪಾವತಿಸದೆ, ಮತ್ತೆ ಕೆಲವು ಬಸ್‌ಗಳು ಪರವಾನಿಗೆ ಉಲ್ಲಂಘಿಸಿ ಸಂಚರಿಸುತ್ತಿರುವುದನ್ನು ಪತ್ತೆ ಹಚ್ಚಿ ಈ ಮೂಲಕ ಮಾಲಕರಿಗೆ ಎಚ್ಚರಿಕೆ ನೀಡಿದೆ. ನಗರದಲ್ಲಿ ಸಂಚರಿಸುವ ಕೆಲವು ಬಸ್ಸುಗಳು ರೂಟ್ ಪರ್ಮಿಟ್ ಉಲ್ಲಂಸಿ ಎಲ್ಲೆಂದರಲ್ಲಿ ಸಂಚರಿಸುವುದು ಕಂಡುಬರುತ್ತಿದೆ.

ಸಿಗ್ನಲ್ ಸಮಸ್ಯೆ ತಪ್ಪಿಸಲು ಖಾಸಗಿ ಸಿಟಿ ಬಸ್‌ಗಳು ಒಳದಾರಿಯನ್ನು ಸಂಚರಿಸಿ ನಿಯಮವನ್ನು ಉಲ್ಲಂಘಿಸುತ್ತಿದೆ ಎಂಬ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ಕೆಲವು ಬಸ್ಸುಗಳು ಕೆಲವೊಮ್ಮೆ ರೂಟ್‌ನ ಸಂಚಾರವನ್ನು ರದ್ದುಗೊಳಿಸಿದರೆ, ಮತ್ತೆ ಕೆಲವು ಬಸ್ಸುಗಳು ಪ್ರಯಾಣಿಕರಿಗೆ ದಾರಿಯಲ್ಲೇ ಇನ್ನೊಂದು ಬಸ್ಸಿಂಗ್ ಹತ್ತಿಸಿ ಕ್ರಾಸಿಂಗ್ ಮಾಡುತ್ತಿದೆ. ಈ ಬಗ್ಗೆ ಸಿಟಿ ಬಸ್ಸುಗಳಿಂದ ಕಿರಿಕಿರಿ ಅನುಭವಿಸುತ್ತಿದ್ದ ಪ್ರಯಾಣಿಕರು ದೂರಿದ್ದರು. ಇದೀಗ ಮಂಗಳೂರು ಸಾರಿಗೆ ಇಲಾಖೆಯ ಈ ಕಾರ್ಯಾಚರಣೆಯಿಂದ ಬಸ್ಸುಗಳ ಮಾಲಕರಿಗೆ ಎಚ್ಚರಿಕೆ ನೀಡಿದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News