ಮಹಿಳೆಯರಿಗೆ ಹಲ್ಲೆ: ದೂರು
Update: 2016-08-17 23:47 IST
ಸುಳ್ಯ, ಆ.17: ಮರ್ಕಂಜದ ಬಟ್ರಮಕ್ಕಿ ಎಂಬಲ್ಲಿ ಮಹಿಳೆಯರಿಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಕುರಿತು ಸುಳ್ಯ ಪೊಲೀಸರಿಗೆ ದೂರು ನೀಡಲಾಗಿದೆ. ಬಟ್ರಮಕ್ಕಿ ಎಂಬಲ್ಲಿ ಪದ್ಮಾವತಿ ಎಂಬವರಿಗೆ ಸ್ಥಳೀಯ ಮೀನಾಕ್ಷಿ ಎಂಬವರು ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಲ್ಲದೆ, ತಡೆಯಲು ಬಂದ ಪದ್ಮಾವತಿ ಸಹೋದರಿ ಜಯಂತಿಯವರ ಕೈಯನ್ನು ತಿರುಚಿ ಗಾಯಗೊಳಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.