ವಿಟ್ಲ: ವಿದ್ಯಾರ್ಥಿನಿ ನಾಪತ್ತೆ
Update: 2016-08-17 23:47 IST
ಬಂಟ್ವಾಳ, ಆ.17: ಹಾಸ್ಟೆಲ್‌ನಿಂದ ಮನೆಗೆ ತೆರಳಿದ್ದ ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ನಾಪತ್ತೆಯಾದ ವಿದ್ಯಾರ್ಥಿನಿಯನ್ನು ಹಾಸನ ಜಿಲ್ಲೆಯ ಆಲೂರು ತಾಲೂಕಿನ ನಲ್ಲೂರು ಗ್ರಾಮದ ಮಲ್ಲೇಗೌಡ ಎಂಬವರ ಪುತ್ರಿ ಪುಷ್ಪಾಎನ್.ಡಿ.(21) ಎಂದು ಗುರುತಿಸಲಾಗಿದೆ. ವಿಟ್ಲದ ಹಿಂದುಳಿದ ವರ್ಗಗಳ ದೇವರಾಜ್‌ಅರಸು ವಸತಿ ಗೃಹದಲ್ಲಿ ಐದು ವರ್ಷಗಳಿಂದ ವಾಸವಾಗಿದ್ದರು. ಆ.11 ರಂದು ಮನೆಗೆ ಹೋಗುವುದಾಗಿ ಹೇಳಿ ಹಾಸ್ಟೆಲ್‌ನಿಂದ ಹೊರಟಿರುವ ಅವರು ಮನೆ ತಲುಪದೆ ನಾಪತ್ತೆಯಾಗಿದ್ದಾರೆೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದೆ.