ಬಡಗನ್ನೂರು: ಮಹಿಳೆಗೆ ತಂಡದಿಂದ ಹಲ್ಲೆ
Update: 2016-08-17 23:49 IST
ಪುತ್ತೂರು, ಆ.17: ಮಹಿಳೆಯೊಬ್ಬರಿಗೆ ತಂಡವೊಂದು ಹಲ್ಲೆ ನಡೆಸಿದ್ದು, ಗಾಯಾಳು ಮಹಿಳೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಕೊಲ ನಿವಾಸಿ ಸಿದ್ದೀಕ್ ಎಂಬವರ ಪತ್ನಿ ಮುಮ್ತಾಝ್(36) ಹಲ್ಲೆಗೊಳಗಾದ ಮಹಿಳೆ. ಸೋಮವಾರ ಕೊಲ ಸ.ಹಿ. ಪ್ರಾ. ಶಾಲೆಯಲ್ಲಿ ನಡೆದ ಸ್ವಾತಂತ್ರೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದ ಮುಮ್ತಾಝ್‌ರಿಗೆ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಹಮೀದ್ ಕೊಯಿಲ, ಟಿ.ಕೆ. ಸಿದ್ದೀಕ್, ಪಾಲಡ್ಕ ಸಿದ್ದೀಕ್, ಮತ್ತು ಪಿ. ಕೆ. ಅಹ್ಮದ್ ಎಂಬವರು ಹಲ್ಲೆ ನಡೆಸಿದ್ದಾಗಿ ಆರೋಪಿಸಿ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.