×
Ad

ಆ.20ರಂದು ‘ಹೆದ್ದಾರಿ ವಿಸ್ತರಣೆ ಕಾಮಗಾರಿಗೆ ಸಚಿವರಿಂದ ಶಿಲಾನ್ಯಾಸ’

Update: 2016-08-17 23:49 IST

ಉಪ್ಪಿನಂಗಡಿ, ಆ.17: ಉಪ್ಪಿನಂಗಡಿ-ಮರ್ದಾಳ ಹೆದ್ದಾರಿ ಅಗಲೀಕರಣಕ್ಕೆ 28 ಕೋಟಿ ರೂ. ಬಿಡುಗಡೆಯಾಗಿದೆ. ಆ.20ರಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರಿಂದ ಕಡಬದಲ್ಲಿ ಗುದ್ದಲಿ ಪೂಜೆ ಹಾಗೂ ಕಡಬ ಗ್ರಾಪಂನಲ್ಲಿ ಬಾಪೂಜಿ ಸೇವಾ ಕೇಂದ್ರ ಉದ್ಘಾಟನೆ ನಡೆಯಲಿದೆ ಎಂದು ಕಡಬ ಜಿಪಂ ಸದಸ್ಯ ಪಿ.ಪಿ.ವರ್ಗೀಸ್ ಹೇಳಿದ್ದಾರೆ.
ಕಡಬ ಸಮುದಾಯ ಆಸ್ಪತ್ರೆ ಮೇಲ್ದರ್ಜೆಗೇರಿ ಹಲವು ವರ್ಷಗಳು ಸಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಸಚಿವ ಯು.ಟಿ.ಖಾದರ್ ಅವರ ಮುತುವರ್ಜಿಯಿಂದ ಆಸ್ಪತ್ರೆಯ ನೂತನ ಕಟ್ಟಡಕ್ಕೆ ನಬಾರ್ಡ್ ಅನುದಾನದಲ್ಲಿ 4 ಕೋಟಿ 80 ಲಕ್ಷ ರೂ. ಮಂಜೂರುಗೊಂಡಿದ್ದು ಶೀಘ್ರ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಲಿದೆ. ಪತ್ರಿಕಾಗೋಷ್ಠಿಯಲ್ಲಿ ಕಡಬ ಗ್ರಾಪಂ ಅಧ್ಯಕ್ಷ ಬಾಬು ಮುಗೇರ, ನೂಜಿಬಾಳ್ತಿಲ ಗ್ರಾಪಂ ಅಧ್ಯಕ್ಷ ಸದಾನಂದ ಸಾಂತ್ಯಡ್ಕ, ತಾಪಂ ಸದಸ್ಯ ಪಝಲ್ ಕೋಡಿಂಬಾಳ, ಕಡಬ ಗ್ರಾಪಂ ಸದಸ್ಯರಾದ ಸೈಮನ್ ಸಿ.ಜೆ, ಹನೀಫ್ ಕೆ.ಎಂ, ಅಶ್ರಫ್ ಶೇಡಿಗುಂಡಿ, ಶರೀಫ್‌ಎ.ಎಸ್. ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News