ಚುಚ್ಚುಮದ್ದು ನೀಡಿ ಮಹಿಳೆಯರನ್ನು ಕೊಂದ ನಕಲಿ ವೈದ್ಯ
ಮುಂಬೈ,ಆಗಸ್ಟ್ 18: ಮಹಾರಾಷ್ಟ್ರದ ಸತಾರದಲ್ಲಿ ಚುಚ್ಚು ಮದ್ದು ನೀಡಿ ಮಹಿಳೆಯರನ್ನು ಕೊಲೆಗೈದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಡಾ. ಸಂತೋಷ್‌ಪಾಲ್ ನಕಲಿ ವೈದ್ಯನೆಂದು ಪೊಲೀಸರು ಸಂಶಯಗೊಂಡಿದ್ದಾರೆಂದು ವರದಿಯಾಗಿದೆ. ತಾನು ಬಿಎಎಂಎಸ್ ಪದವೀಧರ ಎಂದು ಸಂತೋಷ್ ಹೇಳಿಕೊಂಡಿದ್ದರೂ ಹಿಂದೆ ಮಾನ್ ಎಂಬ ಗ್ರಾಮದಲ್ಲಿ ಕ್ಲಿನಿಕೊಂದರಲ್ಲಿ ಸಾಮಾನ್ಯ ನೌಕರನಾಗಿ ಕೆಲಸಮಾಡಿಕೊಂಡಿದ್ದ ಎಂದು ಪೊಲೀಸರು ತನಿಖೆಯಲ್ಲಿ ಕಂಡುಕೊಂಡಿದ್ದಾರೆ.ಮಾನ್‌ನ ಡಾ. ವಿದ್ಯಾಧರ್ ಗೋಟವಾಡ್ಕರ್‌ರ ಕ್ಲಿನಿಕ್‌ನಲ್ಲಿ ಸಂತೋಷ್ ಪಾಲ್ ಕೆಲಸ ಮಾಡುತ್ತಿದ್ದ. ದುರ್ವತನೆಗಾಗಿ ಅಲ್ಲಿಂದ ಹೊರಹಾಕಲಾಗಿತ್ತು ಎಂದು ವೈದ್ಯ ವಿದ್ಯಾಧರ್ ಹೇಳಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ನಂತರ ಆತ ಕ್ಲಿನಿಕ್‌ನ ಆ್ಯಂಬುಲೆನ್ಸನ್ನು ಕದ್ದುಕೊಂಡುಹೋಗಿದ್ದು, ಈ ಕುರಿತು ಆತನ ವಿರುದ್ಧ ಪೊಲೀಸ್ ಕೇಸು ಹಾಕಲಾಗಿದೆ ಎಂದು ವೈದ್ಯ ವಿದ್ಯಾಧರ್ ಪೊಲೀಸರಿಗೆ ತಿಳಿಸಿದ್ದಾರೆ.
ಡಾಕ್ಟರ್ ಎಂದು ಜನರ ವಿಶ್ವಾಸ ಸಂಪಾದಿಸಿದ ಸಂತೋಷ್ ನಂತರ ಪ್ರಸಿದ್ಧ ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತನಾಗಿಯೂ ಗುರುತಿಸಿಕೊಂಡಿದ್ದ.ಇದರ ಮರೆಯಲ್ಲಿ ಆತ ಕಿಡ್ನಿ ಮತ್ತು ಮಾದಕವಸ್ತು ಮಾಫಿಯಗಳೊಂದಿಗೂ ಸಂಬಂಧವಿರಿಸಿಕೊಂಡಿದ್ದ ಎಂದು ಪೊಲೀಸರಿಗೆ ಶಂಕೆಯಿದೆ. ಕಳೆದ ಹದಿಮೂರು ವರ್ಷಗಳಲ್ಲಿ ಈತ ಸಂಬಂಧಿಕರಾದ ಜನಾಬಾಯಿ ಪಾಲ್, ಅಂಗನವಾಡಿ ಕಾರ್ಯಕರ್ತೆ ಮಂಗಳ ಜೆಡೆ ಸಹಿತ ಐವರು ಮಹಿಳೆಯರು ಮತ್ತುಒಬ್ಬ ಪುರುಷನನ್ನು ಕೊಂದಿದ್ದಾನೆಂದು ಪೊಲೀಸರು ಹೇಳಿದ್ದಾರೆ.
ವಾಯ್ ಎಂಬ ಗ್ರಾಮದ ಜ್ಯುವೆಲ್ಲರಿ ಮಾಲಕನಾದ ನತ್ಮಲ್ ಭಂಡಾರಿ ಎಂಬವರು ಈತನಿಂದ ಕೊಲೆಯಾದ ವ್ಯಕ್ತಿ ತನ್ನ ಗುಪ್ತಪ್ರೇಯಸಿ ಸಲ್ಮಾಶೇಖ್‌ನೊಂದಿಗೆ ಜ್ಯುವೆಲ್ಲರಿ ಮಾಲಕನಿಗೆ ಸಂಬಂಧ ಇದೆ ಎಂಬ ಸಂದೇಹದಲ್ಲಿ ಆತನನ್ನು ಕೊಲೆ ಮಾಡಿದ್ದ. ನಂತರ ಸಲ್ಮಾಶೇಖ್‌ಳನ್ನೂ ಹತ್ಯೆಗೈದಿದ್ದ. ಈಹತ್ಯೆಗಳಿಗೆ ದಾದಿಜ್ಯೋತಿ ಮಂದ್ರಾ ನೆರವು ನೀಡಿದ್ದಳು ಎಂದು ಸಂತೋಷ್ ಪಾಲ್ ಪೊಲೀಸರಿಗೆ ಹೇಳಿಕೆ ನೀಡಿದ್ದು. ಆತನ ಮುಂದಿನ ಬಲಿ ಪಶು ಜ್ಯೋತಿ ಮಂದ್ರಾ ಆಗುವವಳಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಈಗ ಜ್ಯೋತಿಯೂ ಪೊಲೀಸ್‌ಕಸ್ಟಡಿಯಲ್ಲಿದ್ದಾಳೆ ಎಂದು ತಿಳಿದು ಬಂದಿದೆ.
ಸಂತೋಷ್‌ನ ಪತ್ನಿ ಪುತ್ರಿಯೊಂದಿಗೆ ಭೂಗತಳಾಗಿದ್ದು, ಪುತ್ರ ಪಾಂಚ್‌ಗನಿಯ ಹಾಸ್ಟೆಲ್‌ನಲ್ಲಿದ್ದು ಕಲಿಯುತ್ತಿದ್ದಾನೆ. ಏಡ್ಸ್ ರೋಗಿ ಸಹಿತ ಇಬ್ಬರು ಮಹಿಳೆಯರನ್ನು ಬಂಗಾರ ದೋಚಲು, ವಿಧವೆಯಾದ ಸಂಬಂಧಿಕಳನ್ನು ಕೊಲೆಗೈದದ್ದು, ಜಮೀನು ವಶಪಡಿಸಿಕೊಳ್ಳಲು, ಅಂಗನವಾಡಿ ಕಾರ್ಯಕರ್ತೆಯನ್ನು ತನ್ನ ರಹಸ್ಯವನ್ನು ಬಹಿರಂಗಪಡಿಸುವೆ ಎಂದು ಬೆದರಿಕೆಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದಕ್ಕಾಗಿ ಎಂದು ಪೊಲೀಸರ ವಿಚಾರಣೆಯಲ್ಲಿ ಸಂತೋಷ್ ಪಾಲ್ ಬಹಿರಂಗಪಡಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಅಂಗನವಾಡಿ ಕಾರ್ಯಕರ್ತೆಯ ಅಪಹರಣ ಪ್ರಕರಣವು ಸಂತೋಷ್ ಪಾಲ್ ನಡೆಸಿರುವ ಕೊಲೆಕೃತ್ಯಗಳು ಬಹಿರಂಗವಾಗಲು ಕಾರಣವಾಯಿತು ಎಂದು ವರದಿ ತಿಳಿಸಿದೆ.