×
Ad

ಉಸೇನ್‌ ಬೋಲ್ಟ್‌ 200 ಮೀಟರ್‌ ಓಟದಲ್ಲಿ ಸೆಮಿಫೈನಲ್‌ಗೆ ; ಗ್ಯಾಟ್ಲಿನ್‌ ಔಟ್‌

Update: 2016-08-18 15:08 IST

ರಿಯೋ ಡಿ ಜನೈರೊ, ಆ.18: ಶರವೇಗದ ಸರದಾರ ಜಮೈಕಾದ ಉಸೇನ್‌ ಬೋಲ್ಟ್‌ ಅವರು ರಿಯೋ ಒಲಿಂಪಿಕ್ಸ್ ನ 200 ಮೀಟರ್‌ ಓಟದಲ್ಲಿ ಸೆಮಿಫೈನಲ್‌ ತಲುಪಿದ್ದಾರೆ.ಆದರೆ ಅವರ ಪ್ರತಿಸ್ಪರ್ಧಿ ಅಮೆರಿಕ ಜಸ್ಟಿನ್‌ ಗ್ಯಾಟ್ಲಿನ್‌ ನಿರ್ಗಮಿಸಿದ್ದಾರೆ. 
ಬೋಲ್ಟ್‌ ಅವರು 19.78 ಸೆಕೆಂಡ್ ಗಳಲ್ಲಿ ಗುರಿ ತಲುಪಿಸಿದರು. ಒಟ್ಟು ಮೂರು ಸೆಮಿಫೈನಲ್‌ಗಳಲ್ಲಿ 28 ಮಂದಿ ಸ್ಪರ್ಧಿಸಿದ್ದರು. ಈ ಪೈಕಿ 8 ಮಂದಿ ತೇರ್ಗಡೆಯಾದರು.
100 ಮೀಟರ‍್ ಓಟದಲ್ಲಿ ಬೋಲ್ಟ್‌  ಚಿನ್ನ ಪಡೆದಾಗ ಬೆಳ್ಳಿ ಗಿಟ್ಟಿಸಿಕೊಂಡಿದ್ದ ಗ್ಯಾಟ್ಲಿನ್‌ ನಾಲ್ಕನೆ(20.13 ಸೆ.) ಸ್ಥಾನದೊಂದಿಗೆ ನಿರ್ಗಮಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News