ಆ.21 ರಂದು ಹಿರಿಯ ನಾಗರಿಕರ ‘ಜೀವನ್‌ಸಂಧ್ಯಾ’ ಕಾರ್ಯಾಗಾರ
Update: 2016-08-18 15:20 IST
ಮಂಗಳೂರು, ಆ.18: ಮಂಗಳೂರು ಪೋರ್ಟ್ ಟೌನ್ ರೋಟರಿ ಕ್ಲಬ್ ವತಿಯಿಂದ ಹಿರಿಯ ನಾಗರಿಕರ ಕುರಿತು ವಿಭಾಗ ಮಟ್ಟದ ಕಾರ್ಯಾಗಾರ ‘ಜೀವನ್ ಸಂಧ್ಯಾ’ ಆ. 21 ರಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆ ತನಕ ನಗರದ ಮಣ್ಣಗುಡ್ಡೆಯ ರೋಟರಿ ಬಾಲಭವನದಲ್ಲಿ ನಡೆಯಲಿದೆ. ಕ್ಲಬ್‌ನ ಅಧ್ಯಕ್ಷ ವಿಶ್ವೇಶ್ವರ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಒತ್ತಡದ ಜೀವನದಿಂದ ಮುಕ್ತರಾಗುವುದು ಹೇಗೆ ಎನ್ನುವ ಕುರಿತು ಮಂಗಳೂರು ರಾಮಕೃಷ್ಣಮಠದ ಸ್ವಾಮಿ ಧರ್ಮವೃತಕಾನಂದ ಉಪವಾಸ ನೀಡಲಿದ್ದಾರೆ. ಹಿರಿಯ ನಾಗರಿಕರ ಆರೈಕೆ ಕುರಿತು ಬಿ. ಶೇಖರ ಶೆಟ್ಟಿ, ಸರಕಾರದ ವಿವಿಧ ಸೌಲಭ್ಯ ಕುರಿತು ಮಂಗಳೂರು ಹಿರಿಯ ನಾಗರಿಕರ ಸಂಘದ ಕೆ. ರಮೇಶ್ ಮಾಹಿತಿ ಒದಗಿಸಲಿದ್ದಾರೆ.
ಕರ್ನಾಟಕ ಮುಕ್ತ ವಿ.ವಿ. ನಿವೃತ್ತ ಕುಲಪತಿ ಡಾ.ಬಿ.ಎ. ವಿವೇಕ ರೈ ಕಾರ್ಯಾಗಾರ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ರೋಹಿನಾಥ್ ಪಿ. ಹಾಗೂ ವಿನಾಯಕ ಪ್ರಭು ಕೆ. ಭಾಗವಹಿಸಲಿದ್ದಾರೆ.