ಜಗತ್ತಿನ ಅತಿದೊಡ್ಡ ಗಾಜಿನ ಸೇತುವೆ ಚೀನಾದಲ್ಲಿ!
Update: 2016-08-18 17:09 IST
ಬೀಜಿಂಗ್,ಆಗಸ್ಟ್ 18: ಜಗತ್ತಿನ ಅತ್ಯಂತ ದೊಡ್ಡ ಗಾಜಿನಿಂದ ಸಿದ್ಧಪಡಿಸಲಾದ ಸೇತುವೆಯನ್ನು ಈವಾರ ಸಂದರ್ಶಕರಿಗಾಗಿ ತೆರೆಯಲಾಗುವುದು ಎಂದು ವರದಿಯಾಗಿದೆ. ಚೀನಾದ ಹುನಾನ್ ಪ್ರಾಂತದಲ್ಲಿ 430ಮೀಟರ್ ಉದ್ದ ಆರು ಮೀಟರ್ ಅಗಲದ ಗಾಜಿನ ಸೇತುವೆಯನ್ನು ನಿರ್ಮಿಸಲಾಗಿದೆ.
ಎರಡು ಬೆಟ್ಟದ ನಡುವೆ ಮುನ್ನೂರು ಮೀಟರ್ ಎತ್ತರದಲ್ಲಿ ಈ ತೂಗು ಸೇತುವೆ ಇದೆ. ಈ ಸೇತುವೆ ನಿರ್ಮಾಣ ವಿಷಯದಲ್ಲಿ ಹತ್ತು ಜಾಗತಿಕ ದಾಖಲೆಗಳು ಆಗಿವೆ ಎಂದು ಅದರ ಮ್ಯಾನೇಜ್‌ಮೆಂಟ್ ಕಮಿಟಿ ಹೇಳಿದೆ. ಪ್ರತಿದಿನಾಲೂ 8000 ಮಂದಿ ಇದನ್ನು ಸಂದರ್ಶಿಸಲಿದ್ದಾರೆ ಎಂದು ಅದು ನಿರೀಕ್ಷೆ ವ್ಯಕ್ತಪಡಿಸಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಸೇತುವೆ ನಿರ್ಮಾಣಕಾರ್ಯ ಪೂರ್ತಿಯಾಗಿತ್ತು ಎಂದು ವರದಿ ತಿಳಿಸಿದೆ.