×
Ad

ಪಕ್ಕಲಡ್ಕ: ಸಮಸ್ತ ಕೇರಳ ಸುನ್ನೀ ಬಾಲವೇದಿಯ ನೂತನ ಸಮಿತಿ ರಚನೆ

Update: 2016-08-18 19:44 IST

ಮಂಗಳೂರು, ಆ.18: ಮುಹಿಯುದ್ದೀನ್ ಮದರಸ ಪಕ್ಕಲಡ್ಕ ಇದರ ಆಶ್ರಯದಲ್ಲಿ ಸಮಸ್ತ ಕೇರಳ ಸುನ್ನೀ ಬಾಲವೇದಿಯ ನೂತನ ಸಮಿತಿಯನ್ನು ಮುಖ್ಯ ಅಧ್ಯಾಪಕರಾದ ಎಸ್.ಎಂ ಉಸ್ಮಾನ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ರಚಿಸಲಾಯಿತು.ಖತೀಬ್ ನಝೀರ್ ಅಝ್ಹರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗೌರವ ಸಲಹೆಗಾರರಾಗಿ ನಝೀರ್ ಅಝ್ಹರಿ ಉಸ್ತಾದ್, ಗೌರವ ಅಧ್ಯಕ್ಷರಾಗಿ ಎಸ್.ಎಂ.ಉಸ್ಮಾನ್ ಮುಸ್ಲಿಯಾರ್, ಕನ್ವೀನರ್ ಆಗಿ ಯಾಕೂಬ್ ಫೈಝಿ , ಉಪ ಕನ್ವೀನರ್ ಆಗಿ ಅಬ್ದುರ್ರಶೀದ್ ದಾರಿಮಿಯವರನ್ನು ಆರಿಸಲಾಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ಅಫ್ತಾಬುರ್ರಹ್ಮಾನ್, ಉಪ ಅಧ್ಯಕ್ಷರಾಗಿ ನಿಝಾಮ್, ಆರೀಶ್, ಪ್ರಧಾನ ಕಾರ್ಯದರ್ಶಿಯಾಗಿ ಝಿಯಾದ್ ಹುಸೈನ್, ಜೊತೆ ಕಾರ್ಯದರ್ಶಿಯಾಗಿ ಸಜಾದ್, ಸಫ್ವಾನ್, ಕೋಶಾಧಿಕಾರಿಯಾಗಿ ಸಫ್ವಾನ್ ಹುಸೈನ್, ಮದ್ರಸ ನಾಯಕ ಆರೀಶ್, ಉಪನಾಯಕ ಸಜಾದ್, ಹಿರಾಂ, ಮದ್ರಸ ನಾಯಕಿಯಾಗಿ ಕುಬ್ರಾ, ಉಪನಾಯಕಿಯಾಗಿ ಆಫಿಕ ಖತೀಜ, ರೈಹಾನ, ಸ್ವಚ್ಛತಾ ಮಂತ್ರಿ ಹಸೀಳ, ಉಪಸ್ವಚ್ಛತಾ  ಮಂತ್ರಿ ರಹೀನ, ಶರ್ಮಿನಾಝ್‌ರನ್ನು ಮತ್ತು 18 ಮಂದಿ ವಿದ್ಯಾರ್ಥಿಗಳನ್ನು ಸದಸ್ಯರನ್ನಾಗಿ ಆರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News