ವಿಟ್ಲ: ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಹಾಸನದಲ್ಲಿ ಪತ್ತೆ
Update: 2016-08-18 20:14 IST
ಬಂಟ್ವಾಳ, ಆ.18: ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯನ್ನು ಹಾಸನದಲ್ಲಿ ಪತ್ತೆ ಹಚ್ಚುವಲ್ಲಿ ವಿಟ್ಲ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಾಸನ ಜಿಲ್ಲೆಯ ಆಲೂರು ತಾಲೂಕಿನ ನಲ್ಲೂರು ಗ್ರಾಮದ ಮಲ್ಲೇಗೌಡ ಎಂಬವರ ಪುತ್ರಿ ಪುಷ್ಪಾಎನ್.ಡಿ (21) ನಾಪತ್ತೆಯಾಗಿದ್ದ ವಿದ್ಯಾರ್ಥಿನಿ. ಈಕೆ ವಿಟ್ಲದ ಹಿಂದುಳಿದ ವರ್ಗಗಳ ದೇವರಾಜ ಅರಸ್ ವಸತಿಗೃಹದಲ್ಲಿ ವಾಸವಿದ್ದು ಆಗಸ್ಟ್ 11ರಂದು ಮನೆಗೆ ತೆರಳುವುದಾಗಿ ಹೇಳಿ ಹಾಸ್ಟೆಲ್‌ನಿಂದ ಹೊರಟವಳು ನಾಪತ್ತೆಯಾಗಿದ್ದಳು. ಈ ಬಗ್ಗೆ ವಿದ್ಯಾರ್ಥಿನಿಯ ಪೋಷಕರು ನೀಡಿದ್ದ ದೂರಿನ ಮೇರೆಗೆ ಕಾರ್ಯ ಪ್ರವೃತ್ತರಾದ ವಿಟ್ಲ ಠಾಣೆ ಪೊಲೀಸರು ಹಾಸನ ಜಿಲ್ಲೆಯಲ್ಲಿ ಪತ್ತೆ ಹಚ್ಚಿ ಠಾಣೆಗೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ನನಗೆ ಮನೆಗೆ ಹೋಗಲು ಮನಸ್ಸಿರಲಿಲ್ಲ. ಆದುದರಿಂದ ಬೇರೆ ಕಡೆಗೆ ತೆರಳಿದ್ದೇನೆ ಎಂದು ವಿದ್ಯಾರ್ಥಿನಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.