ಉಪ್ಪಿನಂಗಡಿ: ಅಕ್ರಮವಾಗಿ ಮದ್ಯಮಾರಾಟ ಮಾಡುತ್ತಿದ್ದ ಇಬ್ಬರ ಸೆರೆ
Update: 2016-08-18 20:49 IST
ಉಪ್ಪಿನಂಗಡಿ, ಆ.18: ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣವನ್ನು ಪತ್ತೆ ಹಚ್ಚಿರುವ ಉಪ್ಪಿನಂಗಡಿ ಪೊಲೀಸರು ಇಬ್ಬರನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೆರ್ನೆ ಗ್ರಾಮದವರಾದ ಶರತ್‌ಕುಮಾರ್ (49) ಹಾಗೂ ಕೃಷ್ಣಪ್ಪ (40) ಬಂಧಿತ ಆರೋಪಿಗಳು. ಇವರಿಬ್ಬರೂ ಪೆರ್ನೆಯಲ್ಲಿರುವ ತಮ್ಮ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯವನ್ನು ದಾಸ್ತಾನಿರಿಸಿ ಮಾರಾಟ ಮಾಡುತ್ತಿದ್ದರೆನ್ನಲಾಗಿದೆ.
ಶರತ್ ಕುಮಾರ್ ಅವರಿಂದ 24 ಬಾಟಲಿ ಮೈಸೂರು ಲ್ಯಾನ್ಸರ್ ಮದ್ಯ ಹಾಗೂ ಏಳು ಬಾಟಲಿ ಬಿಯರ್ ಮತ್ತು 560 ರೂ.ನ್ನು ವಶಪಡಿಸಿಕೊಳ್ಳಲಾಗಿದೆ. ಕೃಷ್ಣಪ್ಪ ಎಂಬವರಿಂದ 20 ಬಾಟಲಿ ಮೈಸೂರ್ ಲ್ಯಾನ್ಸರ್ ಮದ್ಯ ಹಾಗೂ 16 ಬಾಟಲಿ ಬಿಯರ್ ಮತ್ತು 1,800 ರೂ.ನ್ನು ವಶಪಡಿಸಿಕೊಳ್ಳಲಾಗಿದೆ. ಎಂದು ತಿಳಿದುಬಂದಿದೆ.