×
Ad

ಫತೇವುಲ್ಲಾ ಜೊತೆ ‘ನಂಟು ಹೊಂದಿದ’ ಉದ್ಯಮಗಳ ಮೇಲೆ ದಾಳಿ

Update: 2016-08-18 21:15 IST

ಅಂಕಾರ, ಆ. 18: ಅಮೆರಿಕದಲ್ಲಿ ನೆಲೆಸಿರುವ ಧರ್ಮ ಗುರು ಫತೇವುಲ್ಲಾ ಗುಲೇನ್‌ರಿಗೆ ಹಣಕಾಸು ನೆರವು ನೀಡುತ್ತಿದ್ದಾರೆ ಎಂಬ ಆರೋಪವನ್ನು ಎದುರಿಸುತ್ತಿರುವ ಉದ್ಯಮಗಳ ವಿರುದ್ಧ ಟರ್ಕಿ ಪೊಲೀಸರು ಗುರುವಾರ ಬೃಹತ್ ಕಾರ್ಯಾಚರಣೆ ನಡೆಸಿದರು.
ಕಳೆದ ತಿಂಗಳು ನಡೆದ ವಿಫಲ ಸೇನಾ ದಂಗೆಯಲ್ಲಿ ಫತೇವುಲ್ಲಾ ಕೈವಾಡವಿದೆ ಎಂಬುದಾಗಿ ಟರ್ಕಿ ಆರೋಪಿಸುತ್ತಿದೆ.
ದೇಶದ ಆರ್ಥಿಕ ರಾಜಧಾನಿ ಇಸ್ತಾಂಬುಲ್ ಮತ್ತು ಇತರ ಪ್ರಾಂತಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು ಪ್ರಾಸಿಕ್ಯೂಟರ್‌ಗಳು 187 ಬಂಧನ ವಾರಂಟ್‌ಗಳನ್ನು ಹೊರಡಿಸಿದ್ದಾರೆ ಎಂದು ಸಿಎನ್‌ಎನ್-ಟರ್ಕ್ ವರದಿ ಮಾಡಿದೆ.
15 ಪ್ರಾಂತಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸುಮಾರು 1,000 ಪೊಲೀಸರು ಪಾಲ್ಗೊಂಡರು. ಇಸ್ತಾಂಬುಲ್‌ನ ಹಲವಾರು ಜಿಲ್ಲೆಗಳಲ್ಲಿನ ಸುಮಾರು 100 ಸ್ಥಳಗಳ ಮೇಲೆ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದರು.
ಮಂಗಳವಾರವೂ ಪೊಲೀಸರು 120 ಶಂಕಿತರಿಗಾಗಿ ಇಸ್ತಾಂಬುಲ್‌ನ ಡಝನ್‌ಗಟ್ಟಳೆ ಕಂಪೆನಿಗಳ ಮೇಲೆ ದಾಳಿ ನಡೆಸಿದ್ದರು. ಸುಮಾರು 100 ಮಂದಿಯನ್ನು ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News