ಇಳಂತಿಲ: ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ
ಉಪ್ಪಿನಂಗಡಿ, ಆ.18: ಕಲಬೆರಕೆ ರಹಿತ ಉತ್ತಮ ಶುದ್ಧ ಹಾಲು ಪೂರೈಕೆ ಮಾಡುವ ಮೂಲಕ ಸಂಘದ ಸದಸ್ಯರು ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ದ.ಕ.ಹಾಲು ಒಕ್ಕೂಟ ಮಹಾಮಂಡಳಿಯ ವಿಸ್ತರಣಾಧಿಕಾರಿ ಮಂಜುನಾಥ್ ತಿಳಿಸಿದರು.
ಗುರುವಾರ ನಡೆದ ಇಳಂತಿಲ ಗ್ರಾಮದ ಬನ್ನೆಂಗಳ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಗುಣಮಟ್ಟದ ಹಾಲು ಪೂರೈಕೆಯೊಂದಿಗೆ ಪಶುಗಳ ಆರೈಕೆಯಲ್ಲಿಯೂ ಸಂಘದ ಸದಸ್ಯರು ಹೆಚ್ಚಿನ ಆಸಕ್ತಿ ವಹಿಸಿ, ಕಾಲಕಾಲಕ್ಕೆ ಲಸಿಕೆ ಹಾಕಿಸುವ ಮೂಲಕ ಪಶುಗಳು ಆರೋಗ್ಯವಾಗಿರುವಂತೆ ಜಾಗೃತೆ ವಹಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಸಂಘದ ಅಧ್ಯಕ್ಷ ರೋನಾಲ್ಡ್ ಪಿಂಟೋ ಮಾತನಾಡಿ, ಪ್ರಸ್ತುತ ವರ್ಷ ಸಂಘಕ್ಕೆ ಒಂದು ಲಕ್ಷದ 99 ಸಾವಿರ ರೂ.ನಿವ್ವಳ ಲಾಭ ಬಂದಿದ್ದು, ಇದರಲ್ಲಿ 99 ಸಾವಿರವನ್ನು ಹಾಲು ಉತ್ಪಾದಕ ಸಂಘದ ಸದಸ್ಯರಿಗೆ ಬೋನಸ್ ರೂಪದಲ್ಲಿ ನೀಡಲಾಗುವುದು. ಅಲ್ಲದೇ, ಷೇರುದಾರರಿಗೆ ಶೇ.8ರಷ್ಟು ಬೋನಸ್ ನೀಡಲಾಗುವುದು. ಸಂಘದ ಬೆಳವಣಿಗೆಯಲ್ಲಿ ಸದಸ್ಯರ ಪಾತ್ರ ಮಹತ್ವದಾಗಿದ್ದು, ಅವರ ಪರಿಶ್ರಮವೇ ಇದಕ್ಕೆ ಕಾರಣ ಎಂದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಪುರುಷೋತ್ತಮ ಗೌಡ, ಆಡಳಿತ ಮಂಡಳಿ ಸದಸ್ಯ ಕೂಸಪ್ಪಪೂಜಾರಿ ಮೂಡಂಬೈಲು, ಚೆನ್ನಪ್ಪ ಪೂಜಾರಿ ಕಂಗಿನಾರುಬೆಟ್ಟು, ಸುರೇಶ್ ರಾವ್, ದಿನೇಶ್ ಗೌಡ ಕಾಡಕಂಡ, ವಸಂತಿ ಶೆಟ್ಟಿ, ಫ್ಲೋರಿನ್ ಡಿಸೋಜ ಕಲ್ಲಾಪು, ಮಹಾಬಲ ಶೆಟ್ಟಿ, ವಸಂತಿ, ಲೂಸಿ ಪಿಂಟೊ, ಚಂದ್ರಶೇಖರ, ಹಿಲ್ಡಾ ಪಿಂಟೊ, ರಾಜನಾರಾಯಣ ಭಟ್, ಸುರೇಶ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಚಂದ್ರಶೇಖರ ಗೌಡ ಅಜಿರ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.