ಉಡುಪಿ ಜಿಲ್ಲಾ ಬಿಜೆಪಿ ಖಂಡನೆ
Update: 2016-08-18 23:59 IST
ಉಡುಪಿ, ಆ.18: ಪಕ್ಷದ ಸ್ಥಳೀಯ ಸಕ್ರಿಯ ಕಾರ್ಯಕರ್ತ ಕೆಂಜೂರು ಪ್ರವೀಣ್ ಪೂಜಾರಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಹೇಳಿದ್ದಾರೆ.
ಘಟನೆ ಬಗ್ಗೆ ದಿಗ್ಭ್ರಮೆಯನ್ನು ವ್ಯಕ್ತಪಡಿಸಿರುವ ಅವರು, ಘಟನೆ ಅತ್ಯಂತ ಖಂಡನೀಯ ಎಂದಿದ್ದಾರೆ. ಇದೇ ಘಟನೆಯಲ್ಲಿ ಗಾಯಗೊಂಡು ಮಹೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಕ್ಷತ್ ದೇವಾಡಿಗನನ್ನು ಅವರು ಭೇಟಿ ಮಾಡಿದರು.