ಆಸ್ಟ್ರೇಲಿಯದಲ್ಲಿ 5.7ರ ತೀವ್ರತೆಯ ಭೂಕಂಪ
Update: 2016-08-19 00:05 IST
ಸಿಡ್ನಿ (ಆಸ್ಟ್ರೇಲಿಯ), ಆ. 18: ಆಸ್ಟ್ರೇಲಿಯದ ಈಶಾನ್ಯ ಕರಾವಳಿಯಲ್ಲಿ ಗುರುವಾರ ರಿಕ್ಟರ್ ಮಾಪಕದಲ್ಲಿ 5.7ರಷ್ಟಿದ್ದ ತೀವ್ರತೆಯ ಭೂಕಂಪ ಸಂಭವಿಸಿದೆ.
ಕ್ವೀನ್ಸ್‌ಲ್ಯಾಂಡ್ ರಾಜ್ಯದ ಬೋವನ್ ಪಟ್ಟಣದಿಂದ ಸಮುದ್ರದಲ್ಲಿ 54 ಕಿಲೋಮೀಟರ್ ದೂರದಲ್ಲಿ ಏಳು ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಮೆರಿಕ ಜಿಯಾಲಜಿಕಲ್ ಸರ್ವೇ ತಿಳಿಸಿದೆ.
ಟೌನ್ಸ್‌ವಿಲ್ ನಗರದ ಕಟ್ಟಡಗಳನ್ನು ತೆರವು ಗೊಳಿಸಲಾಯಿತು ಎಂದು ‘ಟೌನ್ಸ್‌ವಿಲ್ ಬುಲೆಟಿನ್’ ವರದಿ ಮಾಡಿದೆ.
ಆದಾಗ್ಯೂ, ಭೂಕಂಪದಿಂದ ಹಾನಿ ಸಂಭವಿಸಿದ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದರು.