×
Ad

ಇಂದು ಕಟ್ಟದಪಡ್ಪು ಮಸೀದಿ ಉದ್ಘಾಟನೆ

Update: 2016-08-19 00:06 IST

ಬಂಟ್ವಾಳ, ಆ.18: ಕಟ್ಟದಪಡ್ಪುವಿನಲ್ಲಿ ಪುನರ್ನಿಮಾಣಗೊಂಡ ರಹ್ಮಾನಿಯ ಜುಮಾ ಮಸೀದಿ ಉದ್ಘಾಟನಾ ಸಮಾರಂಭವು ಆ.19ರಂದು ಶುಕ್ರವಾರ ನಡೆಯಲಿದೆ. ಮಸೀದಿ ಉದ್ಘಾಟನೆಯನ್ನು ಪಾಣಕ್ಕಾಡ್ ಶಫೀಕ್ ಅಲಿ ಶಿಹಾಬ್ ತಂಙಳ್ ನೆರವೇರಿಸಲಿದ್ದಾರೆ. ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲು ವಕ್ಫ್ ನಿರ್ವಹಿಸಲಿದ್ದಾರೆ. ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್‌ಹರಿ ಜುಮಾಕ್ಕೆ ನೇತೃತ್ವ ನೀಡಲಿದ್ದಾರೆ ಎಂದು ರಹ್ಮಾನಿಯ ಜುಮಾ ಮಸೀದಿ ಆಡಳಿತ ಸಮಿತಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News