ತಮಿಳುನಾಡು ವಿಧಾನಸಭೆಯ ಅಮಾನತುಗೊಂಡ ಡಿಎಂಕೆ ಶಾಸಕರ ಅಣಕು ಕಲಾಪ
Update: 2016-08-19 11:40 IST
ಚೆನ್ನೈ, ಆ.19: ತಮಿಳುನಾಡು ವಿಧಾನಸಭೆಯಿಂದ ಡಿಎಂಕೆಯ ಶಾಸಕರನ್ನು ಒಂದು ವಾರ ಅವಧಿಗೆ ಅಮಾನತು ಮಾಡಿರುವ ವಿಧಾನಸಭಾ ಸ್ವೀಕರ್ ಕ್ರಮವನ್ನು ವಿರೋಧಿಸಿ ಡಿಎಂಕೆಯ ಶಾಸಕರು ವಿಧಾನ ಸಭೆಯ ಅಣಕು ಕಲಾಪವನ್ನು ಇಂದು ನಡೆಸಿದರು.
ಸೈಂಟ್ ಜಾರ್ಜ್ ಪೋರ್ಟ್‌ನಲ್ಲಿ ನಡೆದ ವಿಧಾನಸಭೆಯ ಅಣಕು ಕಲಾಪದಲ್ಲಿ ಮುಖ್ಯ ಮಂತ್ರಿಯಾಗಿ ಡಿಎಂಕೆಯ ಎಂಕೆ ಸ್ಟಾಲೀನ್ ಮತ್ತು ದೊರೈ ಮುರುಗನ್ ಸ್ವೀಕರ‍್ ಪಾತ್ರ ನಿರ್ವಹಿಸಿ, ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಗಮನ ಸೆಳೆದರು.
ಸದನದಲ್ಲಿ ಗದ್ದಲವನ್ನುಂಟು ಮಾಡಿದ ಕಾರಣಕ್ಕಾಗಿ ಆ.17೭ರಂದು ತಮಿಳುನಾಡು ವಿಧಾನ ಸಭೆಯ 89 ಡಿಎಂಕೆ ಶಾಸಕರನ್ನು ಸ್ಪೀಕರ‍್ ಧನಪಾಲ್ ಅವರು ಒಂದು ವಾರ ತನಕ ಸಸ್ಪೆಂಡ್ ಮಾಡಿದ್ದರು. .
ಸದನದಲ್ಲಿದ್ದ 77ಶಾಸಕರನ್ನು ಮಾರ್ಷಲ್‌ಗಳ ಸಹಾಯದಿಂದ ಸ್ಪೀಕರ್ ಅವರು ಸದನದಿಂದ ಹೊರಕ್ಕೆ ಕಳುಹಿಸಿದ್ದರು.