×
Ad

ಹಜ್ ಯಾತ್ರಿಕರಿಗೆ ಬಿಸಿಲಿನ ಬೇಗೆ ತಡೆಯಲು ಹೊಸ ಸೌರ ಚಾಲಿತ ಸ್ಮಾರ್ಟ್ ಕೊಡೆ

Update: 2016-08-19 17:01 IST

ಜಿದ್ದಾ,ಆ.19: ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳ ಮಕ್ಕಾದಲ್ಲಿ ಹಜ್ಜ್ ವೇಳೆ ಯಾತ್ರಾರ್ಥಿಗಳಿಗೆ ಬಿಸಿಲಿನ ಬೇಗೆ ತಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಸೌದಿ ಮತ್ತು ಫೆಲೆಸ್ತೀನ್ ಕಂಪೆನಿ ಸ್ಮಾರ್ಟ್ ಕೊಡೆಯೊಂದನ್ನು ಕಂಡು ಹಿಡಿದಿದೆ.ಇದು  ಸೌರ ವಿದ್ಯುತ್ ಚಾಲಿತ ಫ್ಯಾನ್ ವ್ಯವಸ್ಥೆಯನ್ನು ಹೊಂದಿದೆ.

    ವಿವಿಧೋದ್ದೇಶ ಸ್ಮಾರ್ಟ್ ಕೊಡೆ ಸೌರಶಕ್ತಿಯನ್ನು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸಲಿದೆ.ಇದು ಈ ಹಗುರ ಕೊಡೆಯು ವಿವಿಧ ಸೌಲಭ್ಯಗಳಿಗೆ ವಿದ್ಯುತ್‌ಒದಗಿಸುತ್ತದೆ. ಸ್ಮಾರ್ಟ್‌ಕೊಡೆಯಲ್ಲಿ ಸೋಲಾರ್ ಪ್ಯಾನೆಲನ್ನು ಸಿದ್ಧಪಡಿಸಿದ್ದು ಇದು ಸೌರ ಶಕ್ತಿಯನ್ನು ಹೀರಿಕೊಳ್ಳುವುದು ಮಾತ್ರವಲ್ಲದೇ ವಿದ್ಯುಚ್ಛಕ್ತಿಯಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸ್ಮಾರ್ಟ್ ಕೊಡೆಯ ಸಹ ಸಂಸ್ಥಾಪಕ ಮನಾಲ್ ದಾಂಡೀಸ್ ವಿವರಿಸಿದ್ದಾರೆ.

    ಹಜ್ಜ್ ಯಾತ್ರಿಕರಿಗೆ ಪರಸ್ಪರ ಸ್ಥಳ ಪತ್ತೆ ಹಚ್ಚಲು ನೆರವಾಗುವ ಸಲುವಾಗಿ ಜಿಪಿಎಸ್ ಆಧಾರಿತ ವ್ಯವಸ್ಥೆ ಇದರಲ್ಲಿದೆ.ಹಾಗೂ ಕೊಡೆಯಲ್ಲಿ ಮೊಬೈಲ್ ಫೋನ್ ಚಾರ್ಜ್ ಸೇರಿದಂತೆ ಇನ್ನಿತರ ಉಪಕರಣಗಳಿಗೆ ಮೂರು ಯುಎಸ್‌ಬಿ ವಿದ್ಯುತ್ ಸಂಪರ್ಕದ ತೂತನ್ನು ಅಳವಡಿಸಲಾಗಿದೆ. ಈ ಸ್ಮಾರ್ಟ್ ಕೊಡೆಯ ಸಂಶೋಧನೆಯ ರೂವಾರಿ ಸೌದಿ ಅರೇಬಿಯಾದ ವಿಜ್ಞಾನಿ ಕಾಮಿಲ್ ಬದವಿಯ.ಇದನ್ನು ಪವಿತ್ರ ಮಕ್ಕಾದಲ್ಲಿ ನಿರ್ಮಿಸಲಾಗಿದ್ದು ,ಸ್ಮಾರ್ಟ್‌ಕೊಡೆಯನ್ನು ಸೌದಿಯಲ್ಲಿ ಕಫ್ಯಯಾ ಎಂದು ಕರೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News