ಪೇರಡ್ಕ: ಕಾರಿಗೆ ಜೀಪ್ ಢಿಕ್ಕಿ
Update: 2016-08-19 20:44 IST
ಕಡಬ, ಆ.19: ಜೀಪೊಂದು ಕಾರಿಗೆ ಢಿಕ್ಕಿಯಾಗಿ ಕಾರು ನಜ್ಜುಗುಜ್ಜಾದ ಘಟನೆ ಕಡಬ ಸಮೀಪದ ಪೇರಡ್ಕ ಎಂಬಲ್ಲಿ ಶುಕ್ರವಾರದಂದು ನಡೆದಿದೆ.
ದಿಲ್ಲಿ ಮೂಲದ ಕುಟುಂಬವೊಂದು ಧರ್ಮಸ್ಥಳದಿಂದ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಜೀಪೊಂದು ಢಿಕ್ಕಿಯಾಗಿ ಈ ಅವಘಡ ಸಂವಿಸಿದೆ.
ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ.