ಕುದ್ರೋಳಿ ಉರ್ದು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ
Update: 2016-08-19 21:27 IST
ಮಂಗಳೂರು, ಆ. 19: ಕುದ್ರೋಳಿಯ ಉರ್ದು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ನಡೆಯಿತು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಖ್ತರ್ ಅಲಿ ಅಧ್ಯಕ್ಷತೆಯಲ್ಲಿ ಕುದ್ರೋಳಿ ವಾರ್ಡಿನ ಕಾರ್ಪೊರೇಟರ್ ಅಬ್ದುಲ್ ಅಜೀಝ್ ಧ್ವಜಾರೋಹಣ ನೆರವೇರಿಸಿದರು.
ಮುಖ್ಯ ಶಿಕ್ಷಕ ಮುಹಮ್ಮದ್ ಹನೀಫ್ ಸ್ವಾಗತಿಸಿದರು. ಸಹ ಶಿಕ್ಷಕಿ ಜೆ.ಬಿ.ಪ್ರೇಮಾ ಕಾರ್ಯಕ್ರಮ ನಿರೂಪಿಸಿದರು. ಆಸ್ಮಾ ಜಮೀನ್ ವಂದಿಸಿದರು. ಸಭೆಯಲ್ಲಿ ಎಸ್‌ಡಿಎಂಸಿ ಸದಸ್ಯರಾದ ಉಮರ್ ಫಕ್ಹಿ, ಫಯಾಝ್ ಅಹ್ಮದ್, ತಾಹಿರಾ, ಹಸೀನಾ, ರೇಶ್ಮಾ ಉಪಸ್ಥಿತರಿದ್ದರು.