×
Ad

ಪಾಣೆಮಂಗಳೂರು: ಪಿಎಫ್‌ಐನಿಂದ ಸ್ವಾತಂತ್ರೋತ್ಸವ

Update: 2016-08-19 23:39 IST

ಬಂಟ್ವಾಳ, ಆ. 19: ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ಪಾಣೆಮಂಗಳೂರು ವಲಯದ ವತಿಯಿಂದ 70ನೆ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಅಕ್ಕರಂಗಡಿ ನೆಹರು ನಗರದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಧ್ವಜಾರೋಹಣವನ್ನು ಪಿಎಪ್‌ಐ ಬಂಟ್ವಾಳ ಪಾಣೆಮಂಗಳೂರು ಎರಿಯಾ ಅಧ್ಯಕ್ಷ ಅಬ್ದುಲ್ ಖಾದರ್ ನೆರವೇರಿಸಿದರು.  ಪಾಪ್ಯುಲರ್ ಪ್ರಂಟ್ ಆಪ್ ಇಂಡಿಯಾ ಬಂಟ್ವಾಳ ಡಿವಿಶನ್ ಅಧ್ಯಕ್ಷ ಇಜಾಝ್ ಅಹ್ಮದ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಅಕ್ಕರಂಗಡಿ ಮತ್ತು ನೆಹರುನಗರಗಳಲ್ಲಿ ಕ್ವಿಝ್ ಕಾರ್ಯಕ್ರಮ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಅತಿಥಿಗಳಾಗಿ ಅಬ್ದುಲ್ ಹಮೀದ್ ಒಮಾನ್, ಅಕ್ಕರಂಗಡಿ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಹಮೀದ್ ಬಾವುಂಞಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News