×
Ad

ಅಭಿವೃದ್ಧಿಗೆ ಆರ್ಥಿಕ ಸೇರ್ಪಡೆ ಅಗತ್ಯ: ಡಾ.ಯಶವಂತ ಡೋಂಗ್ರೆ

Update: 2016-08-20 00:23 IST


ಕಲ್ಯಾಣಪುರ, ಆ.19: ಬೆಳವಣಿಗೆ ಮತ್ತು ಅಭಿವೃದ್ಧಿ ಎಂಬುದು ಸಂಕೀರ್ಣವಾದ ಪರಿಕಲ್ಪನೆಗಳಾಗಿದ್ದು, ಅಭಿವೃದ್ಧಿಯನ್ನು ಸಾಧಿಸಲು ಆರ್ಥಿಕ ಸೇರ್ಪಡೆ ಅತೀ ಅಗತ್ಯ. ಆರ್ಥಿಕ ಸೇರ್ಪಡೆಯನ್ನು ಸಾಧಿಸಲು ಆರ್ಥಿಕ ಸಾಕ್ಷರತೆ, ಬಲವಾದ ಸಾಂಸ್ಥಿಕ ವ್ಯವಸ್ಥೆ ಮತ್ತು ಧೋರಣೆ ಹಾಗೂ ಕಾರ್ಯಕ್ರಮಗಳು ತುರ್ತು ಆವಶ್ಯಕತೆಗಳಾಗಿವೆ ಎಂದು ಮೈಸೂರು ವಿವಿಯ ವಾಣಿಜ್ಯ ಶಾಸ್ತ್ರ ವಿಭಾಗದ ಡೀನ್ ಡಾ.ಯಶವಂತ ಡೋಂಗ್ರೆ ಅಭಿಪ್ರಾಯ ಪಟ್ಟಿದ್ದಾರೆ.


ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗ ಹಾಗೂ ಮಂಗಳೂರು ವಿವಿ ವಾಣಿಜ್ಯ ಶಾಸ್ತ್ರ ಅಧ್ಯಾಪಕರ ಸಂಘ (ಮುಕ್ತಾ)ದ ಸಹಯೋಗದಲ್ಲಿ ‘ವಿತ್ತೀಯ ಸೇರ್ಪಡೆ: ಅವ ಕಾಶಗಳು ಮತ್ತು ಸವಾಲುಗಳು’ ಎಂಬ ವಿಷ ಯದ ಕುರಿತು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾದ ಯುಜಿಸಿ ಪ್ರಾಯೋಜಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾ ಟಿಸಿ ಅವರು ಮಾತನಾಡುತ್ತಿದ್ದರು. ಕಾಲೇಜಿನ ಸಂಚಾಲಕ ಅ.ವಂ.ಸ್ಟಾನಿ ಬಿ. ಲೋಬೊ ಅಧ್ಯಕ್ಷತೆ ವಹಿಸಿದ್ದರು. ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ. ಜೆರಾಲ್ಡ್ ಪಿಂಟೊ, ಕ್ಯಾಂಪಸ್ ನಿರ್ದೇಶಕ ವಂ. ಡಾ.ಪ್ರಕಾಶ್ ಅನಿಲ್ ಕ್ಯಾಸ್ತಾಲಿನೊ, ಸೆಮಿನಾರ್‌ನ ಸಂಯೋಜಕ ನಾಗರಾಜ್ ಹಾಗೂ ಸಂಘಟನಾ ಕಾರ್ಯದರ್ಶಿ ಡಾ. ಹೆರಾಲ್ಡ್ ಮೊನಿಸ್ ಉಪಸ್ಥಿತರಿದ್ದರು.

ಅನುಷಾ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News