×
Ad

ಎ.ಜೆ. ಇಂಜಿನಿಯರಿಂಗ್ ಕಾಲೇಜು: ಪ್ರೇರಣಾ ಕಾರ್ಯಕ್ರಮ

Update: 2016-08-20 00:26 IST

ಮಂಗಳೂರು, ಆ.19: ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿ ಯರಿಂಗ್ ಹಾಗೂ ಟೆಕ್ನಾಲಜಿಯ ಬಿ.ಇ. ಕೋರ್ಸ್ ಮೊದಲ ಬ್ಯಾಚ್‌ನ ಉದ್ಘಾಟನಾ ಸಮಾರಂಭ ಹಾಗೂ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಕ್ರಮ ಕೊಟ್ಟಾರ ಚೌಕಿಯಲ್ಲಿರುವ ಸಂಸ್ಥೆಯ ಕ್ಯಾಂಪಸ್‌ನಲ್ಲಿ ನಡೆಯಿತು.

ಎನ್‌ಐಟಿಕೆ ಸುರತ್ಕಲ್‌ನ ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಡಾ. ಉದಯಕುಮಾರ್ ಯರಗಟ್ಟಿ ಮುಖ್ಯ ಅತಿಥಿಯಾಗಿದ್ದರು.

ಉದ್ಯಮಿ ಹಾಗೂ ಲಕ್ಷ್ಮಿ ಮೆಮೊರಿಯಲ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‌ನ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ ಹಾಗೂ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ, ವಿಭಾಗೀಯ ಮುಖ್ಯಸ್ಥರು(ಎಚ್‌ಒಡಿ)ಗಳಾದ ಡಾ.ರಾಜೇಶ್ ರೈ, ಡಾ. ಆ್ಯಂಟನಿ ಪಿ.ಜೆ., ಪ್ರೊ.ರಾಘವೇಂದ್ರ ಶೆಟ್ಟಿ, ಡಾ.ಕಿಶೋರ್ ಶೆಟ್ಟಿ, ಡಾ.ಸುಜಯ, ಮತ್ತಿತರರು ಉಪಸ್ಥಿತರಿದ್ದರು.

ಎಜೆ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ. ಶಾಂತಾರಾಮ್ ರೈ ಸ್ವಾಗತಿಸಿ ದರು. ಡಾ.ಶಾಂತಾಕುಮಾರಿ ವಂದಿಸಿದರು. ಶಲಾ ಮೊಂತೆರೊ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News