ಸಿಂಧುಗೆ 2 ಕೋಟಿ ರೂ, ಸಾಕ್ಷಿಗೆ 1 ಕೋಟಿ ರೂ. ದಿಲ್ಲಿ ಸರಕಾರದ ಬಹುಮಾನ
Update: 2016-08-20 11:17 IST
ಹೊಸದಿಲ್ಲಿ, ಆ.20: ಮುಖ್ಯ ಮಂತ್ರಿ ಅರವಿಂದ್ ಕೇಜ್ರವಾಲ್ ನೇತೃತ್ವದ ದಿಲ್ಲಿ ರಾಜ್ಯ ಸರಕಾರ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ ಪಿ.ವಿ.ಸಿಂಧು ಅವರಿಗೆ 2 ಕೋಟಿ ರೂ. ಮತ್ತು ಕಂಚು ಜಯಿಸಿದ ಸಾಕ್ಷಿ ಮಲಿಕ್‌ಗೆ 1 ಕೋಟಿ ರೂಪಾಯಿ ನಗದು ಬಹುಮಾನ ಪ್ರಕಟಿಸಿದೆ.
ಇದೇ ವೇಳೆ ಸಾಕ್ಷಿ ಮಲಿಕ್ ತಂದೆಗೆ ಭಡ್ತಿ ನೀಡಲು ನಿರ್ಧರಿಸಿದೆ. ಸಾಕ್ಷಿ ತಂದೆ ಸುಖ್ಬೀರ‍್ ದಿಲ್ಲಿಯ ಸಾರಿಗೆ ಇಲಾಖೆಯಲ್ಲಿ ನೌಕರಿಯಲ್ಲಿದ್ದಾರೆ.
ದಿಲ್ಲಿಯ ಉಪಮುಖ್ಯ ಮಂತ್ರಿ ಮನೀಶ್ ಸಿಸೋಡಿಯಾ ಅವರು ಸಾಕ್ಷಿ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.