ಬೀದಿನಾಯಿ ಕಡಿತಕ್ಕೆ ವೃದ್ಧ ಮಹಿಳೆ ಸಾವು
Update: 2016-08-20 11:24 IST
ಪೂವಾರ್,ಆಗಸ್ಟ್ 20: ಬೀದಿನಾಯಿಗಳ ಕಡಿತಕ್ಕೊಳಾಗಿ ವಯೋವೃದ್ಧ ಮಹಿಳೆಯೊಬ್ಬರು ಮೃತರಾಗಿದ್ದಾರೆಂದು ವರದಿಯಾಗಿದೆ. ಮೃತ ಮಹಿಳೆಯನ್ನು, ಕರುಂಕುಳಂ ಪುಲ್ಲುವಿಳ ಚೆಂಬಕರಾಮನ್‌ತುರದ ಚಿನ್ನಪ್ಪ ಎಂಬವರ ಪತ್ನಿ ಶೀಲುವಮ್ಮ(65) ಎಂದು ಗುರುತಿಸಲಾಗಿದೆ.ಶುಕ್ರವಾರ ರಾತ್ರಿ ಎಂಟೂವರೆ ಗಂಟೆಯ ಹೊತ್ತಿಗೆ ಇವರು ಸಮುದ್ರದ ಬದಿಯಲ್ಲಿ ನಾಯಿಕಡಿತಕ್ಕೊಳಗಾಗಿದ್ದರು. ನಾಯಿಗಳಿಂದ ಅವರನ್ನು ರಕ್ಷಿಸಲು ಯತ್ನಿಸಿದ ಅವರ ಪುತ್ರ ಸೆಲ್ವರಾಜ್ ಮೇಲೆಯೂ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿವೆ. ಸಮುದ್ರಕ್ಕೆ ಹಾರಿ ನಾಯಿಗಳ ಕಡಿತದಿಂದ ಸೆಲ್ವರಾಜ್ ಪಾರಾಗಿದ್ದಾನೆ ಎಂದು ವರದಿ ತಿಳಿಸಿದೆ.
ನಂತರ ಸೆಲ್ವರಾಜ್ ಘಟನೆಯ ಕುರಿತು ಪೊಲೀಸ್ ಠಾಣೆಗೆ ಬಂದು ತಿಳಿಸಿದರೂ, ಪೊಲೀಸರು ನಿರ್ಲಕ್ಷ್ಯದಿಂದ ವರ್ತಿಸಿದರೆಂದು ಆರೋಪ ಕೇಳಿಬಂದಿದೆ. ಪುಲ್ಲುವಿಳ ಮುಂತಾದ ಸಮುದ್ರ ತೀರಗಳಲ್ಲಿ ಬೀದಿ ನಾಯಿಗಳು ದೀರ್ಘ ಸಮಯದಿಂದ ಹಾವಳಿ ನಡೆಸುತ್ತಿವೆ ಎಂದು ವರದಿಯಾಗಿದೆ.