×
Ad

ಹತ್ತುವರ್ಷದ ಬಳಿಕ ಮನೆಗೆ ಮರಳಿದ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಬಾಲಕಿ: 8 ಮಂದಿಯಬಂಧನ!

Update: 2016-08-20 11:56 IST

ಹೊಸದಿಲ್ಲಿ, ಆಗಸ್ಟ್ 20: ಹನ್ನೆರಡನೆ ವಯಸ್ಸಿನಲ್ಲಿ ಇಬ್ಬರು ಅಪಹರಿಸಿ, ಒಂಬತ್ತು ಸಲ ಬೇರೆಬೇರೆಯವರಿಗೆ ಮಾರಾಟಗೊಂಡು ಸಾಮೂಹಿಕ ಅತ್ಯಾಚಾರಕ್ಕೊಳಗಾದ ಬಾಲಕಿ ಕೊನೆಗೂ ಹತ್ತು ವರ್ಷದ ಬಳಿಕ ಮನೆಗೆ ಮರಳಿದ್ದಾಳೆಂದು ವರದಿಯೊಂದು ತಿಳಿಸಿದೆ. ಅಪಹರಣಕ್ಕೊಳಗಾಗುವಾಗ ಹನ್ನೆರಡು ವರ್ಷಗಳ ಬಾಲಕಿಯಾಗಿದ್ದ ಈಕೆಗೆ ಈಗ 22 ವರ್ಷ ವಯಸ್ಸಾಗಿದ್ದು. 10 ವರ್ಷದ ಕಠಿಣ ಹಿಂಸೆ-ದೌರ್ಜನ್ಯಗಳನ್ನು ಅನುಭವಿಸಿ ಕೊನೆಗೂ ಮನೆ ತಲುಪಿದ್ದಾಳೆಂದು 2006 ಡಿಸೆಂಬರ್ ಒಂಬತ್ತಕ್ಕೆ ಸಹೋದರಿಯ ಮನೆಗೆ ಹೋಗುತ್ತಿದ್ದಾಗ ಒಬ್ಬಗಂಡಸು, ಒಬ್ಬ ಹೆಂಗಸು ಸೇರಿ ಬಾಲಕಿಯನ್ನು ಅಪಹರಿಸಿದ್ದರು ಎನ್ನಲಾಗಿದೆ. ಬಾಲಕಿಯ ಪ್ರಜ್ಞೆತಪ್ಪಿಸಿ ಗುಜರಾತ್ ಕರೆದೊಯ್ಯಲಾಗಿತ್ತು. ಅಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಪಡಿಸಲಾಗಿತ್ತು. ಕೋಣೆಯೊಳಗೆ ಕೂಡಿಹಾಕಿ ಸಿಗರೇಟ್‌ನಿಂದ ಬೆಂಕಿ ಇಡಲಾಗಿತ್ತು. ಇವೇ ಮುಂತಾದ ಕಠಿಣ ಹಿಂಸೆಯನ್ನು ಬಾಲಕಿ ಅನುಭವಿಸಿದ್ದಾಳೆನ್ನಲಾಗಿದೆ. ಗುಜರಾತ್‌ನ ಹೊಲಗಳಲ್ಲಿಯೂ ದುಡಿಸಿಕೊಳ್ಳಲಾಗಿತ್ತೆಂದೂ ಬಾಲಕಿ ತಿಳಿಸಿದ್ದಾಳೆ. 2009ರಲ್ಲಿ ಬಾಲಕಿಯನ್ನು ಇಬ್ಬರು ಪುರುಷರಿಗೆ ಮಾರಲಾಗಿತ್ತು. ಅವಳನ್ನು 12,000 ರೂಪಾಯಿ ಕೊಟ್ಟು ಖರೀದಿಸಿದ ಬಾಬ್ಲಿ, 10,000 ರೂಪಾಯಿಗೆ ಖರೀದಿಸಿದ ಪಂಜಾಬ್‌ನ ಸ್ವರೂಪ್ ಚಂದ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನಂತರ 20,000 ರೂಪಾಯಿಗೆ ಖರೀದಿಸಿದ 70 ವರ್ಷ ವಯಸ್ಸಿನ ಪ್ರತಾಪ್ ಸಿಂಗ್ ಮಗ ಜಂಶೀರನಿಗೆ 2006ರಲ್ಲಿ ಬಾಲಕಿಯನ್ನು ವಿವಾಹ ಮಾಡಿಕೊಟ್ಟಿದ್ದ. ಆನಂತರ ತಂದೆ ಮಗ ಸೇರಿ ಬಾಲಕಿಯನು ರೋಡಾ ಸಿಂಗ್ ಎಂಬಾತನಿಗೆ ಮಾರಿದ್ದರು. ಇದೀಗ ರೋಡಾ ಸಿಂಗ್ ಭೂಗತನಾಗಿದ್ದಾನೆ. ಪ್ರತಾಪ್ ಸಿಂಗ್, ಮತ್ತು ಜಂಶೀರನ್ನು ಪಂಜಾಬ್‌ನಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಲಕಿ ಮಾರಾಟದಲ್ಲಿ ಸಹಕರಿಸಿದ ಮಾಖನ್ ಸಿಂಗ್, ಬಿರೇಂದರ್ ಸಿಂಗ್ ಎಂಬಿಬ್ಬರನ್ನೂ ಬಂಧಿಸಲಾಗಿದೆ.

   ಕಳೆದ ತಿಂಗಳು ಡ್ಯಾನ್ಸ್ ಬಾರೊಂದರಲ್ಲಿ ಬಾಲಕಿ ಕೆಲಸ ಮಾಡುತ್ತಿರುವುದನ್ನು ನೋಡಿದ ಮಹಿಳೆಯೊಬ್ಬರು ಬಾಲಕಿಗೆ ಪಾರಾಗಲು ಅವಕಾಶ ಒದಗಿಸಿ ಕೊಟ್ಟರೆಂದು ವರದಿ ತಿಳಿಸಿದೆ. ಇಬ್ಬರು ವಯೋವೃದ್ಧರ ಸಹಿತ ಎಂಟು ಮಂದಿಯನ್ನು ಈವರೆಗೆ ಪೊಲೀಸರು ಬಂಧಿಸಿದ್ದಾರೆ. ಮೊತ್ತಮೊದಲು ಅಪಹರಿಸಿದ್ದ ರಂಜು ಮತ್ತು ಆಕೆಯ ಪತಿ ಶ್ಯಾಮ್‌ಸುಂದರರನ್ನು ದಿಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕೆ ಸಂಬಂಧಿಸಿ ಪಂಜಾಬ್, ಗುಜರಾತ್, ಪಶ್ಚಿಮ ಬಂಗಾಳ,ದಿಲ್ಲಿ, ಹರಿಯಾಣ ಮುಂತಾದೆಡೆ 400 ಮಂದಿಯನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಆಗಸ್ಟ್ ಎರಡರಂದು ಬಾಲಕಿ ಹಾಗೂ ಅವಳ ಅಮ್ಮ ಪೊಲೀಸರಿಗೆ ದೂರು ನೀಡಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News