×
Ad

ಗಿನ್ನೆಸ್ ದಾಖಲೆ ಪುಸ್ತಕ ಸೇರಿದ ಮೋದಿ ಸೂಟು

Update: 2016-08-20 16:09 IST

ಹೊಸದಿಲ್ಲಿ,ಆ.20: ಕಳೆದ ವರ್ಷ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಭಾರತ ಭೇಟಿಯ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಧರಿಸಿದ್ದ ಮೊನೋಗ್ರಾಂ ಸೂಟ್ ಭಾರೀ ಸುದ್ದಿ ಮಾಡಿತ್ತಲ್ಲದೆ ಪ್ರಧಾನಿಯನ್ನು ಟೀಕೆಗೂ ಗುರಿ ಮಾಡಿತ್ತು. ಈ ಸೂಟ್ ಕಳೆದ ಫೆಬ್ರವರಿಯಲ್ಲಿ ನಡೆದ ಹರಾಜಿನಲ್ಲಿ ಸೂರತ್ ಉದ್ಯಮಿ ಲಾಲ್ಜಿ ಭಾಯಿಪಟೇಲ್ ಅವರಿಂದ 4.31 ಕೋಟಿ ರೂ.ಗೆ ಖರೀದಿಸಲ್ಪಟ್ಟಿರುವುದು ಈಗ ಇತಿಹಾಸ.

ಇದೀಗ ಬಂದಿರುವ ಸುದ್ದಿಯೆಂದರೆ ಮೋದಿ ಧರಿಸಿದ್ದ ಈ ಸೂಟ್ ‘‘ಮಾರಾಟ ಮಾಡಲ್ಪಟ್ಟ ವಿಶ್ವದ ಅತ್ಯಂತ ದುಬಾರಿ ಸೂಟ್’’ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆಯಲ್ಲದೆ, ಗಿನ್ನೆಸ್ ದಾಖಲೆ ಪುಸ್ತಕವನ್ನೂ ಸೇರಿಕೊಂಡಿದೆ.

ವಿದೇಶದಲ್ಲಿ ವಾಸಿಸುವ ಭಾರತೀಯ ಉದ್ಯಮಿ ರಮೇಶ್ ವಿರಾನಿ ತಾನು ತನ್ನ ಪುತ್ರನ ವಿವಾಹ ಸಂದರ್ಭ ಈ ದುಬಾರಿ ಸೂಟ್ ಅನ್ನು ಮೋದಿಗೆ ನೀಡಿದ್ದಾಗಿ ಹೇಳಿಕೊಂಡಿದ್ದರು. ಈ ಸೂಟ್ ಹರಾಜಿನಿಂದ ದೊರೆತ ಹಣವನ್ನು ಗಂಗಾ ನದಿ ಶುದ್ಧೀಕರಣಕ್ಕಾಗಿ ಉಪಯೋಗಿಸಲಾಗುವುದು ಎಂದು ಹೇಳಲಾಗಿತ್ತು.

ಮೋದಿಯ ಈ ಸೂಟ್ ವಿವಾದದ ನಂತರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ‘ಸೂಟು ಬೂಟಿನ ಸರಕಾರ’’ ಎಂದು ಆಗಾಗ ಕೇಂದ್ರದ ಮೋದಿ ಸರಕಾರವನ್ನು ಹೀಗಳೆಯುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News