ಮೂಡುಬಿದಿರೆ: ವಿಶ್ವ ಛಾಯಾಗ್ರಹಣ ದಿನಾಚರಣೆ

Update: 2016-08-20 16:23 GMT

ಮೂಡುಬಿದಿರೆ, ಆ.20: 177ನೆ ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ ಸೌತ್ ಕೆನರಾ ಫೋಟೊಗ್ರಾಪರ್ಸ್‌ ಅಸೋಸಿಯೇಶನ್ (ರಿ) ದ.ಕ. ಮತ್ತು ಉಡುಪಿ ಜಿಲ್ಲೆ ಇದರ ಮೂಡುಬಿದಿರೆ ವಲಯದ ಆಶ್ರಯದಲ್ಲಿ ಮೋಹಿನಿ ಅಪ್ಪಾಜಿ ನಾಯಕ್ ಸ್ಮಾರಕ ಆಳ್ವಾಸ್ ವಿಶೇಷ ಮಕ್ಕಳ ಶಾಲೆಯಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಶುಕ್ರವಾರ ಆಚರಿಸಲಾಯಿತು.

ಎಸ್‌ಕೆಪಿಎ ಮೂಡುಬಿದಿರೆ ವಲಯದ ಗೌರವಾಧ್ಯಕ್ಷ ಭಾನುಪ್ರಕಾಶ್ ರಾವ್ ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ದತ್ತಾತ್ರೇಯ ಕಾರ್ಕಳ ಮಾತನಾಡಿ, ಇಂಥಹ ಕಾರ್ಯಕ್ರಮ ಶ್ಲಾಘನೀಯ ಮತ್ತು ಸ್ಪೂರ್ತಿದಾಯಕ ಎಂದರು. ವಿಕಲಚೇತನ ಮಕ್ಕಳಿಗಾಗಿ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ವೌಲ್ಯ ಜೀವನ್ ಮಾತನಾಡಿ, ಛಾಯಾಗ್ರಾಹಕರು ಪ್ರಸ್ತುತ ಸನ್ನಿವೇಶದಲ್ಲಿ ಹವ್ಯಾಸಿ ಛಾಯಾಗ್ರಾಹಕರ ಸ್ಪರ್ಧೆಯ ಜೊತೆಗೆ ಪತ್ರಿಕಾ ಛಾಯಾಗ್ರಾಹಕರ ಸವಾಲುಗಳನ್ನು ಎದುರಿಸಿಕೊಳ್ಳುತ್ತಿದ್ದು, ಸ್ಟುಡಿಯೊ ನಡೆಸುತ್ತಿರುವ ಛಾಯಾಗ್ರಾಹಕರು ತಮ್ಮನ್ನು ತಾವು ಹೊರಜಗತ್ತಿಗೆ ತೋರ್ಪಡಿಸಿಕೊಳ್ಳುವ ಬಗ್ಗೆ ಸಲಹೆ ನೀಡಿದರು.
ವಿಲ್ಫ್ರೆಡ್ ಮೆಂಡೊನ್ಸಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಾಲಾ ಮುಖ್ಯ ಶಿಕ್ಷಕಿ ಅವಿತಾ, ಸಹ ಪ್ರಾಧ್ಯಾಪಕ ಆದರ್ಶ ಹೆಗ್ಡೆ, ಹೇಮನಾಥ ಭಂಡಾರಿ, ಎಸ್‌ಕೆಪಿಎ ಕಾರ್ಯದರ್ಶಿ ಸುನೀಲ್ ಕೋಟ್ಯಾನ್, ರಾಮ ಕೋಟ್ಯಾನ್ ಉಪಸ್ಥಿತರಿದ್ದರು.

ವಲಯಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಮಣೀಂದ್ರ ಭಟ್ ನಿರೂಪಿಸಿ, ವಂದಿಸಿದರು. ವಲಯದ ಸರ್ವ ಸದಸ್ಯರು ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News