ದ.ಕ.ಜಿಲ್ಲಾ ಎನ್‌ಎಸ್‌ಯುಐ ಕಾರ್ಯದರ್ಶಿಯಾಗಿ ಬಾತಿಶ್ ಆತೂರು ಆಯ್ಕೆ
Update: 2016-08-20 23:21 IST
ಮಂಗಳೂರು, ಆ.20: ದಕ್ಷಿಣ ಕನ್ನಡ ಜಿಲ್ಲಾ ಎನ್‌ಎಸ್‌ಯುಐನ ಕಾರ್ಯದರ್ಶಿಯಾಗಿ ಹಾಗೂ ಪುತ್ತೂರು ತಾಲೂಕು ಉಸ್ತುವಾರಿಯಾಗಿ ಇಬ್ರಾಹೀಂ ಬಾತೀಶ್ ಆತೂರು ಅವರನ್ನು ಆಯ್ಕೆ ಮಾಡಲಾಗಿದೆ.
ಪುತ್ತೂರು ಶಾಸಕಿ ಹಾಗೂ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್ ರಹೀಂ, ಯುವ ಕಾಂಗ್ರೆಸ್ ಅಧ್ಯಕ್ಷ ಅರ್ಶದ್ ದರ್ಬೆ ಅವರ ಶಿಫಾರಸ್ಸಿನಂತೆ ಜಿಲ್ಲಾಧ್ಯಕ್ಷ ಆಶೀತ್ ಜಿ.ಪಿರೇರ ಆದೇಶ ಹೊರಡಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.