ಖಾಸಗಿ ಇಮೇಲ್ ಬಳಕೆ ಲಿಖಿತ ಉತ್ತರ ನೀಡಲು ಹಿಲರಿಗೆ ಕೋರ್ಟ್ ಸೂಚನೆ

Update: 2016-08-20 18:07 GMT

ವಾಶಿಂಗ್ಟನ್, ಆ. 20: ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಖಾಸಗಿ ಇಮೇಲ್ ಸರ್ವರೊಂದನ್ನು ಬಳಸಿದ ಬಗ್ಗೆ ದಾಖಲಾಗಿರುವ ಮೊಕದ್ದಮೆಯಲ್ಲಿ ಹಿಲರಿ ಕ್ಲಿಂಟನ್ ಲಿಖಿತ ಉತ್ತರ ನೀಡಬೇಕು ಎಂದು ಅಮೆರಿಕದ ಫೆಡರಲ್ ನ್ಯಾಯಾಧೀಶರೋರ್ವರು ತೀರ್ಪು ನೀಡಿದ್ದಾರೆ.

ಆದಾಗ್ಯೂ, ಕನ್ಸರ್ವೇಟಿವ್ ಗುಂಪು ‘ಜುಡಿಶಿಯಲ್ ವಾಚ್’ ದಾಖಲಿಸಿದ ಮೊಕದ್ದಮೆಯಲ್ಲಿ ಸಾಕ್ಷ ನುಡಿಯಲು ವೈಯಕ್ತಿಕವಾಗಿ ಹಾಜರಾಗುವಂತೆ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯೂ ಆಗಿರುವ ಹಿಲರಿಗೆ ಆದೇಶ ನೀಡಲು ನ್ಯಾಯಾಧೀಶರು ನಿರಾಕರಿಸಿದ್ದಾರೆ.

ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಅನಧಿಕೃತ ಸರ್ವರ್ ಬಳಸಿದ ಬಗ್ಗೆ ಜುಡಿಶಿಯಲ್ ವಾಚ್ ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಲು ನ್ಯಾಯಾಧೀಶರು ಶುಕ್ರವಾರ ನೀಡಿದ ತೀರ್ಪಿನಲ್ಲಿ 30 ದಿನಗಳ ಕಾಲಾವಕಾಶವನ್ನು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News