ಕೊಂದವರು ಹಿಂಜಾವೇ ಕಾರ್ಯಕರ್ತರಲ್ಲದಿದ್ದರೆ ಉಗ್ರರೇ: ಮೃತ ಪ್ರವೀಣ್ ಪೂಜಾರಿಯ ಭಾವ ಪ್ರಸಾದ್ ಪ್ರಶ್ನೆ

Update: 2016-08-20 18:58 GMT

ಉಡುಪಿ, ಆ.20: ಕೆಂಜೂರಿನ ಪ್ರವೀಣ್ ಪೂಜಾರಿ ಹತ್ಯೆಗೂ ಹಿಂಜಾವೇ ಸಂಘ ಟನೆಗೂ ಯಾವುದೇ ಸಂಬಂಧವಿಲ್ಲ ಎಂಬ ಜಗದೀಶ್ ಕಾರಂತ್ ಹೇಳಿಕೆ ಯನ್ನು ತೀವ್ರವಾಗಿ ಖಂಡಿಸಿರುವ ಮೃತ ಪ್ರವೀಣ್ ಪೂಜಾರಿಯವರ ಭಾವ ಪ್ರಸಾದ್ ಪೂಜಾರಿ ಸಾಣೂರು, ‘‘ಹಾಗಾದರೆ ಪ್ರವೀಣ್‌ನನ್ನು ಕೊಂದ ವರು ಭಯೋತ್ಪಾದಕರೇ, ನಕ್ಸಲರೇ ಅಥವಾ ಐಸಿಸ್ ಉಗ್ರರೇ’’ ಎಂದು ಪ್ರಶ್ನಿಸಿದ್ದಾರೆ.

ಈಗಾಗಲೇ ವಿಶ್ವ ಹಿಂದೂ ಪರಿಷತ್, ಬಜರಂಗದಳದವರು ಹೇಳಿಕೆ ನೀಡಿ ಈ ಕೃತ್ಯ ಮಾಡಿದವರು ನಮ್ಮವರಲ್ಲ ಎಂದು ಹೇಳಿಕೊಂಡಿದ್ದಾರೆ. ಇದೀಗ ಹಿಂಜಾವೇಯವರು ನಾವಲ್ಲ ಅಂತ ಹೇಳಿದರೆ ಪೊಲೀಸರು ಬಂಧಿಸಿದ 21 ಮಂದಿ ಯಾವ ಸಂಘಟನೆಗೆ ಸೇರಿದವರು ಅಂತ ಇವರೇ ಹೇಳಲಿ ಎಂದು ಅವರು ಪತ್ರಿಕೆಗೆ ತಿಳಿಸಿದರು.

‘‘ಈವರೆಗೆ ವೌನವಾಗಿದ್ದ ಹಿಂಜಾವೇ ಮುಖಂಡ ಜಗದೀಶ್ ಕಾರಂತ್ ಕೊನೆ ಗಳಿಗೆಯಲ್ಲಿ ಬಂದು ಇವರು ನಮ್ಮವರಲ್ಲ ಎಂದು ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಈಗ ಬಂಧಿತರಾಗಿರುವವರೇ ಈ ಕೃತ್ಯ ಎಸಗಿರುವುದಕ್ಕೆ ಪೊಲೀಸರಲ್ಲಿ ಸಾಕ್ಷವಿದೆ. ಅಲ್ಲದೆ ಅವರಿಂದ ಕಬ್ಬಿಣದ ರಾಡ್ ವಶಪಡಿಸಿಕೊಳ್ಳಲಾಗಿದೆ. ಬಂಧಿತರೇ ಈ ಕೃತ್ಯ ಎಸಗಿರುವುದಾಗಿ ಒಪ್ಪಿದ್ದಾರೆ. ಈಗ ಬಂಧಿತರು ಅಮಾ ಯಕರು ಎಂದು ಹೇಳುವುದು ಅಕ್ಷಮ್ಯ. ಇದರ ವಿರುದ್ಧ ಪ್ರತಿಭಟನೆ ಮಾಡಿದರೆ ಈ ದೇಶದಲ್ಲಿ ಕಾನೂನಿಗೆ ಬೆಲೆ ಇಲ್ಲ ಎಂದೇ ಅರ್ಥ’’ ಎಂದರು.

‘‘ಪೊಲೀಸರು ಸರಿಯಾದ ಮಾರ್ಗ ದಲ್ಲಿ ಪ್ರಕರಣದ ತನಿಖೆಯನ್ನು ನಡೆಸುತ್ತಿ ದ್ದಾರೆ. ಗೋರಕ್ಷಣೆ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳಲು ಯಾವುದೇ ಸಂಘಟನೆಗೆ ಅಧಿಕಾರ ಇಲ್ಲ. ಇವರ ಅಜೆಂಡಾದಲ್ಲಿ ಜನರ ಜೀವಕ್ಕೆ ಬೆಲೆ ಇಲ್ಲದಿದ್ದರೆ ಅಂತಹ ಸಂಘಟನೆಯನ್ನು ಕೂಡಲೇ ನಿಷೇಧಿ ಸಬೇಕು. ದಾಳಿಕೋರ ರೆಲ್ಲರೂ ರೌಡಿಗಳೇ ಹೊರತು ಗೋವಿನ ಬಗ್ಗೆ ಕಾಳಜಿ ಇದ್ದವರಲ್ಲ’’ ಎಂದವರು ಕಟುವಾಗಿ ಟೀಕಿಸಿದರು.


ಗೋರಕ್ಷಕರು ಗೋವನ್ನು ಸಾಕಲಿ: ಪ್ರಮೋದ್

ಗೋರಕ್ಷಕರು ಪ್ರತಿ ಗ್ರಾಮದಲ್ಲಿ ಗೋಶಾಲೆಯನ್ನು ತೆರೆದು, ಅದರ ಪಾಲನೆ ಪೋಷಣೆಯ ಜವಾಬ್ದಾರಿಯನ್ನು ವಹಿಸಿ ಕೊಳ್ಳಲಿ. ಆ ಗ್ರಾಮದಲ್ಲಿ ಹುಟ್ಟುವ ಗಂಡು ಕರುವನ್ನು, ಬಂಜೆ ಹಸುಗಳನ್ನು ಸಾಕುವ ಕೆಲಸ ಮಾಡುವ ಮೂಲಕ ಗೋವಿನ ಬಗ್ಗೆ ತಮ್ಮ ನಿಜವಾದ ಕಾಳಜಿಯನ್ನು ತೋರಿಸಲಿ. ಅದು ಬಿಟ್ಟು ದಾಳಿ ನಡೆಸಿ ಜನರ ಜೀವ ಬಲಿತೆಗೆಯುವುದಲ್ಲ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಟೀಕಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗೋವಿನ ಬಗ್ಗೆ ಪ್ರಚೋದಿ ಸುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕಾಗಿದೆ. ಮೃತ ಪ್ರವೀಣ್ ಪೂಜಾರಿ ಕುಟುಂಬಕ್ಕೆ ಪರಿಹಾರ ಒದಗಿಸಲು ಅವಕಾಶಗಳಿವೆಯೇ ಎಂಬುದು ನನಗೆ ಗೊತ್ತಿಲ್ಲ. ಆ ಬಗ್ಗೆ ಪರಿಶೀಲಿಸಿ, ಬೇರೆ ಪ್ರಕರಣದಲ್ಲಿ ಪರಿಹಾರ ಕೊಟ್ಟಿದ್ದರೆ ಇವರ ಕುಟುಂಬಕ್ಕೂ ಕೊಡಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News