×
Ad

ಬೇರೆ ದೇಶಗಳಲ್ಲಿ ನಿಯೋಜಿಸಲು ಸೇನೆಯನ್ನು ರೂಪೀಕರಿಸಿದ ಇರಾನ್

Update: 2016-08-21 13:44 IST

ಟೆಹ್ರಾನ್,ಆಗಸ್ಟ್ 21: ಅರಬ್ ದೇಶಗಳಲ್ಲಿ ಸಂಘರ್ಷ ನಡೆಯುತ್ತಿರುವ ಕ್ಷೇತ್ರಗಳಲ್ಲಿ ನಿಯೋಜಿಸಲಿಕ್ಕಾಗಿ ಇರಾನ್ ಲಿಬರೇಶನ್ ಆರ್ಮಿ ಎಂಬ ಹೆಸರಿನಲ್ಲಿ ಸೇನೆಯೊಂದನ್ನು ರೂಪಿಸಿದೆ ಎಂದು ವರದಿಯಾಗಿದೆ. ಅಲ್‌ಮಿಶ್ರಿಕ್ ಎಂಬ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಇರಾನ್‌ನ ಸೇನೆ “ರೆವಲ್ಯೂಶನರಿ ಗಾರ್ಡ್” ಮುಖ್ಯಸ್ಥ ಮುಹಮ್ಮದ್ ಅಲಿ ಫಲಕಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆಂದು ವರದಿ ತಿಳಿಸಿದೆ.

  ಸಿರಿಯ, ಯಮನ್ ಮುಂತಾದ ಅಧಿಕಾರಕ್ಕಾಗಿ ಸಂಘರ್ಷಗ್ರಸ್ತವಾಗಿರುವ ದೇಶಗಳಲ್ಲಿ ಈಗಾಗಲೇ ಇರಾನ್ ಹಸ್ತಕ್ಷೇಪ ನಡೆಸುತ್ತಿದೆ. ಇಲ್ಲಿ ಸೇನೆಯನ್ನು ನಿಯೋಜಿಸಲುಹೊಸದಾಗಿ ಲಿಬರೇಶನ್ ಆರ್ಮಿಯನ್ನು ರೂಪಿಸಲಾಗಿದೆ ಎಂದು ತಿಳಿದು ಬಂದಿದೆ.

 ಸಿರಿಯದಲ್ಲಿ ಕಾಸಿಂ ಸುಲೈಮಾನಿ ಎಂಬ ಸೇನಾಮುಖ್ಯಸ್ಥನ ಕೈಕೆಳಗೆ ಲಿಬರೇಷನ್ ಆರ್ಮಿ ರೂಪೀಕರಿಸಲಾಗಿದೆ ಎಂದು ಫಲಕಿ ಬಹಿರಂಗಪಡಿಸಿದ್ದಾರೆ. ಆದರೆ ಈ ಸೇನೆಯ ಕುರಿತು ಹೆಚ್ಚಿನ ವಿವರಗಳನ್ನು ಅವರು ಬಿಟ್ಟುಕೊಟ್ಟಿಲ್ಲ. ಸೇನೆಯಲ್ಲಿ ಇರಾನಿಯೇತರರೂ ಇದ್ದಾರೆಂದು ಫಲಕಿ ತಿಳಿಸಿದ್ದಾರೆ.ಸಿರಿಯದಂತಹ ಸಂಘರ್ಷಗ್ರಸ್ತ ಸ್ಥಳಗಳಿಗೆ ಸೈನಿಕರನ್ನುನೇರವಾಗಿ ಕಳುಹಿಸಿಕೊಡಲಾಗುತ್ತಿಲ್ಲ. ಅಲ್ಲಿರುವವರಿಗೆ ತರಬೇತಿ ನೀಡುವ ಸೌಕರ್ಯ ಒದಗಿಸಲಾಗುತ್ತಿದೆ ಎಂದು ಫಲಕಿ ತಿಳಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News