ಮಾಂತೂರು: ಹಿದಾಯತುಲ್ ಇಸ್ಲಾಂ ಅರೆಬಿಕ್ ಮದರಸದ ‘ಶಿಕ್ಷಕ-ರಕ್ಷಕ ಸಭೆ
Update: 2016-08-21 14:23 IST
ಮಾಂತೂರು, ಆ.21: ಹಿದಾಯತುಲ್ ಇಸ್ಲಾಂ ಅರೆಬಿಕ್ ಮದರಸದ ‘ಶಿಕ್ಷಕ-ರಕ್ಷಕ ಸಭೆಯು ಜಮಾಅತ್ ಅಧ್ಯಕ್ಷ ಕನಿಮಜಲ್ ಮುಹಮ್ಮದ್ ಹಾಜಿಯವರ ಅಧ್ಯಕ್ಷತೆಯಲ್ಲಿ ಮದರಸ ಹಾಲ್‌ನಲ್ಲಿ ಜರುಗಿತು.
ಚಾಪಲ್ಲ ಮುದರ್ರಿಸ್ ಅಶ್ರಫ್ ಬಾಖವಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ತಂದೆ ತಾಯಿ ಪಾತ್ರ ಮಹತ್ತರವಾದದ್ದು ಎಂದರು. ಸದರ್ ಉಸ್ತಾದ್ ಜಮಾಲ್ ದಾರಿಮಿ ಮಕ್ಕಳ ವಿದ್ಯಾಭ್ಯಾಸದಲ್ಲಿ ಶಿಕ್ಷಕ ರಕ್ಷಕರ ಪಾತ್ರದ ಬಗ್ಗೆ ವಿವರಿಸಿದರು.
ವೇದಿಕೆಯಲ್ಲಿ ಜಮಾಅತ್ ಉಪಾಧ್ಯಕ್ಷ ಹಂಝ ಹಾಜಿ ರೋಯಲ್, ಕಾರ್ಯದರ್ಶಿ ಪಿ.ಕೆ.ಅಬೂಬಕರ್, ಅಹ್ಮದ್ ಹಾಜಿ, ಬಿ.ಎಂ.ಮುಹಮ್ಮದ್ ಹಾಗು ಜಮಾಅತ್ ಕಮಿಟಿ ಸದಸ್ಯರು, ಮದರಸದ ಅಧ್ಯಾಪಕರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ವರದಿ: ರಫೀಕ್ ಎಂ.ಎ