ಟಿಆರ್‌ಎಫ್‌ನಿಂದ ಪ್ರತಿಭಾವಂತ ಮದರಸ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ

Update: 2016-08-21 11:51 GMT

ಮಂಗಳೂರು, ಆ.21: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಮದ್ರಸ ಶಿಕ್ಷಣದಲ್ಲಿ ದ.ಕ ಜಿಲ್ಲೆಯಲ್ಲೇ ಅತ್ಯಧಿಕ ಅಂಕ ಪಡೆದ 32 ಮದ್ರಸ ವಿದ್ಯಾರ್ಥಿಗಳಿಗೆ ‘ಟ್ಯಾಲೆಂಟ್ ಮದ್ರಸ ಎಕ್ಸಲೆನ್ಸ್ ಅವಾರ್ಡ್ 2016’ ಪ್ರಶಸ್ತಿ ಪ್ರದಾನ ಸಮಾರಂಭ ಸಂಸ್ಥೆಯ ಸಭಾಂಗಣದಲ್ಲಿ ಜರಗಿತು.

ಕಾರ್ಯಕ್ರಮವನ್ನು ದ.ಕ ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್‌ನ ಅಧ್ಯಕ್ಷ ಕೆ.ಎಲ್. ಉಮರ್ ದಾರಿಮಿ ಪಟ್ಟೋರಿ ಉದ್ಘಾಟಿಸಿದರು. ಸುನ್ನಿ ಎಜುಕೇಶನ್ ಡೆವಲಪ್‌ಮೆಂಟ್ ಕಮಿಟಿ ಆಫ್ ಕರ್ನಾಟಕ (ಎಸ್‌ಇಡಿಸಿ)ದ ರಾಜ್ಯಾಧ್ಯಕ್ಷ ಕೆ.ಕೆ. ಮುಹಿಯುದ್ದೀನ್ ಕಾಮಿಲ್ ಸಖಾಫಿ ದುಆ ನೆರವೇರಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಮಿಸ್ಬಾಹ್ ನಾಲೆಜ್ ಫೌಂಡೇಶನ್‌ನ ಅಧ್ಯಕ್ಷ ಬಿ.ಎಂ. ಮುಮ್ತಾಝ್ ಅಲಿ, ಬಿಸಿಎಫ್ ದುಬಾ ಉಪಾಧ್ಯಕ್ಷ ಅಬ್ದುಲ್ಲತೀಫ್ ಮುಲ್ಕಿ, ಉದ್ಯಮಿಗಳಾದ ಅಸ್ಗರ್ ಹಾಜಿ ಡೆಕ್ಕನ್ ಪ್ಲಾಸ್ಟ್, ಅರ್ಶದ್ ಹುಸೈನ್ ವಾಮಂಜೂರು ಪ್ಲೈವುಡ್, ಅಬ್ದುಲ್ ಖಾದರ್ ಹಾಜಿ ಎವರ್‌ಗ್ರೀನ್ ಸಪ್ಲಯರ್ಸ್‌, ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಮುಬೀನ್ ಜುಬೈಲ್, ಟಿಆರ್‌ಎಫ್ ಸಲಹೆಗಾರರಾದ ಸುಲೈಮಾನ್ ಶೇಖ್ ಬೆಳುವಾಯಿ, ಬಿ.ಎ.ಅಕ್ಬರ್ ಅಲಿ ಮೊದಲಾದವರು ಉಪಸ್ಥಿತರಿದ್ದರು.

ಟಿಆರ್‌ಎಫ್ ಅಧ್ಯಕ್ಷ ರಿಯಾಝ್ ಕಣ್ಣೂರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸರಗಳ್ಳನನ್ನು ಹಿಡಿಯಲು ಪೊಲೀಸರೊಂದಿಗೆ ಸಹಕರಿಸಿ ಪೊಲೀಸ್ ಇಲಾಖೆಯಿಂದ ಪ್ರಶಂಸಿಸಲ್ಪಟ್ಟ ಬಿ.ಎ. ಹಾರಿಸ್ ಅಂಗರಗುಂಡಿ ಅವರನ್ನು ಸನ್ಮಾನಿಸಲಾಯಿತು. 5 ನೆ ತರಗತಿಯ 10, 7ನೆ ತರಗತಿಯ 11, 10ನೆ ತರಗತಿಯ 8 ಮತ್ತು 12ನೆ ತರಗತಿಯ 3 ಒಟ್ಟು 32 ಮಂದಿ ವಿದ್ಯಾರ್ಥಿಗಳಿಗೆ ಸ್ಮರಣಿಕೆ, ಪ್ರಶಸ್ತಿ ಪತ್ರ ಮತ್ತು ನಗಸು ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ಟಿಆರ್‌ಎಫ್ ಸಲಹೆಗಾರ ಅಬ್ದುಲ್ ಸಲಾಂ ಮುಸ್ಲಿಯಾರ್ ಪೆರ್ನೆ ಸ್ವಾಗತಿಸಿ, ಉಪಾಧ್ಯಕ್ಷ ಸೈದುದ್ದೀನ್ ಬಜ್ಪೆ ಪ್ರಸ್ತಾವನೆಗೈದರು. ಅಸ್ಲಂ ಗೂಡಿನಬಳಿ ವಂದಿಸಿದರು. ರಫೀಕ್ ಮಾಸ್ಟರ್ ಮತ್ತು ಜಸೀಂ ಸಜಿಪ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News