ಯಡಿಯೂರಪ್ಪರಿಗೆ ‘ಶುಭಸೂಚನೆ’ ನೀಡಿದ ಅಮಿತ್ ಶಾ
Update: 2016-08-21 20:02 IST
ಮಂಗಳೂರು, ಆ.21: ಭಾರತ ತಿರಂಗಾ ಯಾತ್ರೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರನ್ನು ‘ಭವಿಷ್ಯದ ಮುಖ್ಯಮಂತ್ರಿ’ ಎಂದು ಸಂಬೋಧಿಸುವ ಮೂಲಕ ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನ ಬಿಎಸ್‌ವೈಗೇ ಎಂಬ ಸುಳಿವನ್ನು ಅಮಿತ್ ಶಾ ಪರೋಕ್ಷವಾಗಿ ನೀಡಿದರು.
ವೇದಿಕೆಯಲ್ಲಿರುವ ಗಣ್ಯರ ಹೆಸರನ್ನು ಉಲ್ಲೇಖಿಸುವಾಗ ‘ಮಾಜಿ ಮುಖ್ಯಮಂತ್ರಿ ಹಾಗೂ ಭವಿಷ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ,’ ಎಂದು ಸಂಬೋಧಿಸುವ ಮೂಲಕ ಕರ್ನಾಟಕದಲ್ಲಿ ಮುಂದೆ ಬಿಜೆಪಿ ಆಡಳಿತಕ್ಕೆ ಬರುವುದು ಖಚಿತ. ಜೊತೆಗೆ ಯಡಿಯೂರಪ್ಪನವರೇ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂಬ ಸೂಚನೆ ನೀಡಿದರು.