ಉ.ಪ್ರ: ಅಪಾಯದ ಮಟ್ಟ ದಾಟಿದ ಗಂಗಾ, ಯಮುನಾ

Update: 2016-08-21 14:55 GMT

ಲಕ್ನೋ,ಆ.21: ಉತ್ತರಪ್ರದೇಶದ ವಿವಿಧೆಡೆ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಗಂಗಾನದಿ ಹಾಗೂ ಯಮುನಾ ನದಿಗಳು ಅಪಾಯದ ಮಟ್ಟವನ್ನು ವಿ ಮೀರಿ ಹರಿಯುತ್ತಿವೆ.

   ರಾಜ್ಯದ ಫಾಫಾಮಾವ್ (ಅಲಹಾಬಾದ್), ಮಿರ್ಝಾಪುರ, ವಾರಣಾಸಿ, ಗಾಝಿಪುರ್ ಹಾಗೂ ಬಲಿಯಾಗಳಲ್ಲಿ ಗಂಗಾ ನದಿಯು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದರೆ, ಚಿಲಿಯಾಘಾಟ್ (ಬಂಡಾ) ಹಾಗೂ ನೈನಿ (ಅಲಹಾಬಾದ್) ಹಾಗೂ ಮೊಹ್ನಾ (ಜಲೌನ್)ಗಳಲ್ಲಿ ಯಮುನಾ ನದಿ ಉಕ್ಕಿ ಹರಿಯುತ್ತಿದೆ. ಅದೇ ರೀತಿ ಶಾರದಾ ನದಿ ಕೂಡಾ ಖೇರಿ ಜಿಲ್ಲೆಯ ಪಾಲಿಕಾಲಾನ್‌ನಲ್ಲಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆಯೆಂದು ಕೇಂದ್ರ ಜಲ ಆಯೋಗ (ಸಿಡಬ್ಲುಸಿ) ತಿಳಿಸಿದೆ.ಶಹರಣ್‌ಪುರದಲ್ಲಿ 5 ಸೆಂ.ಮೀ., ಮೊರದಾಬಾದ್ ಹಾಗೂ ದಿಯೋಬಂದ್‌ನಲ್ಲಿ ತಲಾ 2 ಸೆಂ.ಮೀ.ಮೇರಠ್ ಮತ್ತು ಠಾಕೂರ್‌ದವಾರಾದಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆಯೆಂದು ಹವಾಮಾನ ಇಲಾಖೆಯ ಪ್ರಕಟಣೆ ತಿಳಿಸಿದೆ. ಆದಾಗ್ಯೂ ಉತ್ತರಪ್ರದೇಶದ ಪೂರ್ವಭಾಗದದ ಕೆಲವೆಡೆ ವಿರಳ ಅಥವಾ ಸಾಧಾರಣ ಮಳೆಯಾಗಿದ್ದು, ಅಲ್ಲಿ ಇನ್ನೂ ಒಣಹವೆ ಮುಂದುವರಿದಿದೆ.

ಆದರೆ ಮುಂದಿನ 24 ತಾಸುಗಳಲ್ಲಿ ಗುಡುಗು ಸಿಡಿಲಿನೊಂದಿಗೆ ಭಾರೀ ಮಳೆಯಾಗುವ ನಿರೀಕ್ಷೆಯಿದೆಯೆಂದು ಹವಾಮಾನ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News