ಧರ್ಮಸ್ಥಳ ಕ್ಷೇತ್ರದಲ್ಲಿ ಆನ್‌ಲೈನ್ ಮೂಲಕ ರೂಂ ಬುಕಿಂಗ್ ಸೌಲಭ್ಯ ಆರಂಭ
ಬೆಳ್ತಂಗಡಿ, ಆ.21: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಗಸ್ಟ್ 21 ರಂದು ಆನ್‌ಲೈನ್ ರೂಂ ಬುಕಿಂಗ್ ಸೌಲಭ್ಯಕ್ಕೆ ಚಾಲನೆ ದೊರೆತಿದೆ. ಭಕ್ತಾದಿಗಳ ಅನುಕೂಲಕ್ಕಾಗಿ ಕ್ಷೇತ್ರದ ಅಧಿಕೃತ ವೆಬ್‌ಪೇಜ್‌ನಲ್ಲಿ ಈ ಆನ್‌ಲೈನ್ ಬುಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಸ್ತುತ ಧರ್ಮಸ್ಥಳದಲ್ಲಿರುವ ರಜತಾದ್ರಿ ವಸತಿಗೃಹದ 110 ರೂಂಗಳು ಈ ಆನ್‌ಲೈನ್ ಬುಕಿಂಗ್ ಸೌಲಭ್ಯದಡಿ ಭಕ್ತಾದಿಗಳಿಗೆ ಲಭಿಸಲಿದೆ.
ಈ ಆನ್‌ಲೈನ್ ರೂಂ ಬುಕಿಂಗ್‌ಗಾಗಿ ಭಕ್ತಾದಿಗಳು ಶ್ರೀ ಕ್ಷೇತ್ರ ಧರ್ಮಸ್ಥಳದ ವೆಬ್‌ಪೇಜ್ http://www.shridharmasthala.org ಗೆ ಲಾಗಿನ್ ಆಗಿ ರೂಂ ಬುಕಿಂಗ್ ಮಾಡಲು ಸಿದ್ಧಪಡಿಸಿರುವ ಲಿಂಕ್ ಮೂಲಕ ಬುಕ್ ಮಾಡಬಹುದು. ಸೂಕ್ತ ವಿವರಗಳನ್ನು ತುಂಬಿದ ನಂತರ ಬುಕಿಂಗ್ ಕುರಿತಾದ ಧೃಢಿಕರಣ ಪತ್ರ ಈ ಮೇಲ್ ಮೂಲಕ ಬುಕ್ ಮಾಡಿದವರಿಗೆ ತಲುಪುತ್ತದೆ. ನಂತರ ಈ ಪತ್ರದ ಪ್ರತಿಯನ್ನು ಶ್ರೀ ಕ್ಷೇತ್ರಕ್ಕೆ ಬಂದು ವಸತಿಗೃಹದಲ್ಲಿ ತೋರಿಸಿ ರೂಂ ಪಡೆಯಬಹುದು.
ಸದ್ಯಕ್ಕೆ ರೂಂ ಬುಕಿಂಗ್‌ಗೆ ಮಾತ್ರ ವ್ಯವಸ್ಥೆ ಇದ್ದು ಮುಂದಿನ ದಿನಗಳಲ್ಲಿ ರೂಂ ಬುಕಿಂಗ್ ಹಣ ಪಾವತಿಗೂ ಆನ್‌ಲೈನ್‌ನಲ್ಲೇ ವ್ಯವಸ್ಥೆ ಕಲ್ಪಿಸಲಾಗುವುದು. ಎಂದು ಕ್ಷೇತ್ರದ ಪ್ರಕಟನೆ ತಿಳಿಸಿದೆ.