ತುಂಬೆ ಎಸ್‌ಡಿಪಿಐಯಿಂದ ವನಮಹೋತ್ಸವ
Update: 2016-08-22 15:02 IST
ಬಂಟ್ವಾಳ, ಆ.22: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ತುಂಬೆ ಗ್ರಾಮ ಸಮಿತಿಯ ವತಿಯಿಂದ ಸೋಮವಾರ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಸಮಿತಿಯ ಅಧ್ಯಕ್ಷ ಇಸ್ಮಾಯೀಲ್ ಪೆರ್ಲಬೈಲ್, ಗ್ರಾಮ ಪಂಚಾಯತ್ ಸದಸ್ಯ ಝಹೂರು ಅಹ್ಮದ್, ಮಾಜಿ ಸದಸ್ಯ ಅಝೀಝ್ ಟಿ.ಎ., ಪಿಎಫ್‌ಐ ತುಂಬೆ ವಲಯಾಧ್ಯಕ್ಷ ಇಮ್ತಿಯಾಝ್ ಎ.ಕೆ., ಪ್ರಮುಖರಾದ ನವಾಝ್, ಅಕ್ಬರ್ ವಲವೂರು, ಸಮೀರ್, ಮುಸ್ತಫಾ, ಸದ್ದಾಂ, ಶೌಹಾನ್, ಸಿದ್ದೀಕ್, ಸುಹಾಝ್‌ಉಪಸ್ಥಿತರಿದ್ದರು.