ಪೋಸೋಟ್ ತಂಙಳ್ ಪ್ರಥಮ ಸಂಸ್ಮರಣಾ ಸಮ್ಮೇಳನ
Update: 2016-08-22 18:41 IST
ಮಂಗಳೂರು, ಆ. 22: ಅಸಯ್ಯದ್ ಮುಹಮ್ಮದ್ ಉಮರುಲ್ ಫಾರೂಖ್ ಅಲ್ ಬುಖಾರಿ ಪೋಸೋಟ್ ತಂಙಳ್‌ರ ಪ್ರಥಮ ಸಂಸ್ಮರಣಾ ಸಮ್ಮೇಳನದ ರಾಜ್ಯ ಮಟ್ಟದ ‘ಸಿದ್ಧತಾ ಸಮಾವೇಶ’ವು ಇಂದು ಸಂಜೆ ನಗರದ ನೌಕರರ ಭವನದಲ್ಲಿ ನಡೆಯಿತು.
ಸಮ್ಮೇಳನದ ಅಧ್ಯಕ್ಷತೆಯನ್ನು ಸೈಯ್ಯದ್ ಅಲವಿ ತಂಙಳ್ ಅಲ್-ಹೈದ್ರೋಸಿ ಕಿನ್ಯ ವಹಿಸಿದ್ದರು. ಸಯ್ಯದ್ ಸುಹೈಲ್ ತಂಙಳ್ ಸಿದ್ಧತಾ ಸಮಾವೇಶವನ್ನು ಉದ್ಘಾಟಿಸಿದರು. ಸೈಯದ್ ಜಲಾಲುದ್ದೀನ್ ಅಲ್ ಬುಖಾರಿ ಹಾಗೂ ಬಾಕಿಮಾರ್ ಸಅದಿ ಪೊಸೋಟ್ ತಂಙಳ್ ಅವರು ಪ್ರಥಮ ಸಂಸ್ಮರಣಾ ಸಮ್ಮೇಳನದ ಮಹತ್ವವನ್ನು ತಿಳಿಸಿದರು. ಎಮ್ಮೆಸ್ಸೆಂ ಅಬ್ದುಲ್ ರಶೀದ್ ಝೈನಿ ಸ್ವಾಗತಿಸಿದರು. ಎನ್.ಎಸ್. ಉಮರ್ ವಂದಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕದ ಸಾದಾತುಗಳು, ಉಲಮಾ, ಉಮರಾ ನೇತಾರರು, ಸಂಘಟನಾ ಪ್ರತಿನಿಧಿಗಳು, ಎಸ್.ವೈ.ಎಸ್., ಎಸ್.ಎಮ್.ಎ., ಎಸ್.ಜೆ.ಎಮ್., ಎಸೆಸೆಫ್‌ನ ಪದಾಧಿಕಾರಿಗಳು ಭಾಗವಹಿಸಿದ್ದರು.