×
Ad

ಶಂಶುಲ್ ಹುದಾ ವಿದ್ಯಾರ್ಥಿ ಸಂಘ ರಚನೆ

Update: 2016-08-22 18:48 IST

ಮಂಗಳೂರು, ಆ. 22: ಬೋಳಿಯಾರಿನ ಮದ್ರಸದಲ್ಲಿ ಶಂಶುಲ್ ಹುದಾ ವಿದ್ಯಾರ್ಥಿ ಸಂಘ ರಚನಾ ಸಭೆ ರವಿವಾರ ಮದ್ರಸ ಸಭಾಂಗಣದಲ್ಲಿ ನಡೆಯಿತು. ಮಸೀದಿಯ ಖತೀಬ್ ಎನ್.ಅಬ್ದುಲ್ ರಹ್ಮಾನ್ ಫೈಝಿ ನೇರಳಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಮದ್ರಸ ಮುಖ್ಯ ಪ್ರಾಧ್ಯಾಪಕ ವಿ.ಟಿ.ಅಬ್ದುಸ್ಸಲಾಂ ಚಿಶ್ತಿ ದುವಾ ನೆರವೇರಿಸಿದರು. ಅಧ್ಯಾಪಕ ಬಿ.ಎಂ.ಅಲಿ ಮೌಲವಿ ಕಡ್ತಮುಗೇರು, ಎಂ.ಪಿ.ಉಮರ್ ಮುಸ್ಲಿಯಾರ್ ರಾಧುಕಟ್ಟೆ ಹಾಗೂ ಕೆ.ಮುಹಮ್ಮದ್ ಮಸ್ಲಿಯಾರ್ ಕರಾಯ ಮಾತನಾಡಿದರು. ಇದೇ ಸಂದರ್ಭ 2016-17ನೆ ಸಾಲಿಗೆ ಪದಾಧಿಕಾರಿಗಳನ್ನು ಆರಿಸಲಾಯಿತು. ಗೌರವಾಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಫೈಝಿ, ಅಧ್ಯಕ್ಷರಾಗಿ ಅಹ್ಮದ್ ಬಶೀರ್, ಪ್ರಧಾನ ಕಾರ್ಯದರ್ಶಿಯಾಗಿ ಜೌಹರ್ ಅಲಿ, ಕಾರ್ಯದರ್ಶಿಗಳಾಗಿ ಕಬೀರ್, ಲುಕ್ಮಾನ್, ಕೋಶಾಧಿಕಾರಿಯಾಗಿ ಸಫ್ವಾನ್, ಸಂಘಟನಾ ಕಾರ್ಯದರ್ಶಿಯಾಗಿ ಅಸ್ವದ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಮೀಮ್, ಶಂಶುದ್ದೀನ್, ನಝೀರ್ ಹಾಗೂ ನೌಷಾದ್ ಅವರನ್ನು ಆಯ್ಕೆ ಮಾಡಲಾಯಿತು.

ಮದ್ರಸ ವಿದ್ಯಾರ್ಥಿ ಅಹ್ಮದ್ ಬಶೀರ್ ಸ್ವಾಗತಿಸಿದರು. ಜೌಹರ್ ಅಲಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News