ಗೃಹರಕ್ಷಕ ಘಟಕದಿಂದ ಸ್ವಚ್ಛತಾ ಕಾರ್ಯಕ್ರಮ
Update: 2016-08-22 18:50 IST
ಮಂಗಳೂರು, ಆ. 22: ಸುರತ್ಕಲ್ ಗೃಹರಕ್ಷಕ ಘಟಕದ ವತಿಯಿಂದ ಗೃಹರಕ್ಷಕರು ಕಾಟಿಪಳ್ಳ ಗಣೇಶಪುರದ ಶ್ರೀ ಜಾರಂದಾಯ ದೇವಸ್ಥಾನ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಡಾ.ಮುರಲೀ ಮೋಹನ ಚೂಂತಾರು, ಪರಿಸರವನ್ನು ಸ್ವಚ್ಚವಾಗಿಡುವುದರಿಂದ ಆರೋಗ್ಯ ವೃದ್ಧಿ ಮಾತ್ರವಲ್ಲದೇ ಮಾರಣಾಂತಿಕ ರೋಗಗಳಾದ ಡೆಂಗ್ಯೂ, ಮಲೇರಿಯಾ ಮುಂತಾದ ರೋಗಗಳನ್ನು ನಿಯಂತ್ರಿಸಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಸುರತ್ಕಲ್ ಘಟಕದ ಘಟಕಾಧಿಕಾರಿಗಳಾದ ರಮೇಶ್, ಗೃಹರಕ್ಷಕರು ಹಾಗೂ ಗೃಹರಕ್ಷಕಿಯರು ಪಾಲ್ಗೊಂಡಿದ್ದರು.